Saturday 30 April 2016

ಮೋಹನ ಮುರಲಿ ನಾನು ಕಂಡಂತೆ ನನಗೆ ಕಂಡಷ್ಟು

ನೀನು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಪದ್ಯದ ಅರ್ಥ ತಿಳಿಸಿ analyse ಮಾಡಿ ಒಂದು Podcast ಮಾಡಿದರೆ ದುಡ್ಡು ಕೊಟ್ಟಾದರೂ ಕೇಳಿಯೇನು ಅಂತ ಗೆಳೆಯರೊಬ್ಬರು ಹೇಳಿದರು! ಮೈಸೂರುಅನಂತಸ್ವಾಮಿಗಳ ಸಂಗೀತ, ರತ್ನಮಾಲಾ ಪ್ರಕಾಶ್, ಎಂ ಡಿ ಪಲ್ಲವಿ ಇವರ ಸುಶ್ರಾವ್ಯ ಹಾಡುಗಾರಿಕೆಯಿಂದ ಎಲ್ಲರ ಮನಗೆದ್ದ ಹಾಡು ಇದು. ಮನೋ ಮೂರ್ತಿ ಸಂಗೀತ ಸಂಯೋಜಿಸಿ ಸಂಗೀತಾ ಕಟ್ಟಿ ಮತ್ತು ರಾಜು ಅನಂತಸ್ವಾಮಿ ಹಾಡಿದ ಹಾಡೂ ಜನಪ್ರಿಯವೇ. ಇದನ್ನು ಇಂಗ್ಲಿಷಿಗೆ ಅನುವಾದ ಮಾಡಿ ಕೊಡು,ಇದರ ವಿಶ್ಲೇಷಣೆ ಮಾಡಿ ಒಂದು ಬ್ಲಾಗ್ ಪೋಸ್ಟ್ ಆದರೂ ಬರಿ ಅಂದಿದ್ದಾರೆ. ಈ ನಿಟ್ಟಿನಲ್ಲಿ ಈ ಪದ್ಯದ ಕರುಳು ಬಗೆದು ಅದರ ಕೊಲೆ ಮಾಡುವ ಪುಟ್ಟ ಪ್ರಯತ್ನ ಇದು!

 ಸ್ವಲ್ಪ ಹಿನ್ನೆಲೆ ನೋಡೋಣ. ನಾವು ಈಗ ನೋಡುತ್ತಿರುವಂತಹ ಕವಿತೆಗಳು ಸುಮಾರು 1910ರ ನಂತರ ಬಂದವು ಅನ್ನಬೇಕು. ಆಗಿನ ಕವಿತೆಗಳು ಹೆಚ್ಚಾಗಿ ಒಲವು, ಚೆಲುವು , ಹೂವು,ಬೆಳದಿಂಗಳು, ನವಿಲು/ಕೋಗಿಲೆ, ಗುಲಾಬಿ, ತಂಗಾಳಿ, ಪ್ರೀತಿ- ಪ್ರೇಮ, ನವಿರಾದ ಭಾವನೆಗಳು ಇಂತಹ ವಿಷಯಗಳ ಬಗ್ಗೆಯೇ ಇರುತ್ತಿದ್ದವು. ಕಾವ್ಯ ಅಂದರೆ ಕಿವಿಗೆ ಇಂಪಾದದ್ದು, ಕವಿ ಅಂದರೆ ಸೌಂದರ್ಯದ ಆರಾಧಕ ಅನ್ನುವ ಭಾವನೆ ಇತ್ತು. ಪ್ರಕೃತಿ, ದೇವರು, ಹೆಣ್ಣು, ಸೌಂದರ್ಯ, ಆದರ್ಶಗಳು ಇವೇ ಕವನದ ವಸ್ತುಗಳು. ಬಿ ಎಂ ಶ್ರೀ, ತೀನಂ ಶ್ರೀ , ಕುವೆಂಪು, ಪುತಿನ,ನರಸಿಂಹ ಸ್ವಾಮಿ, ಬೇಂದ್ರೆ  ಎಲ್ಲರೂ ಇಂತಹ ಪದ್ಯಗಳನ್ನು ಬರೆದವರೇ. ಇದನ್ನು ನವೋದಯ ಸಾಹಿತ್ಯ ಅನ್ನುತ್ತಾರೆ. (ಇಂಗ್ಲೀಷಿನಲ್ಲಿ romanticism) ಹೀಗೆ ಬರೀ ಪ್ರಕೃತಿ ಸೌಂದರ್ಯ, ತಂಗಾಳಿ, ಪ್ರೀತಿ- ಪ್ರೇಮ, ಸೂರ್ಯೋದಯ ಇಂತಹ ವಿಷಯಗಳ ಬಗ್ಗೆ ಎಷ್ಟು ದಿನ ಕೊರೆಯುವುದು ಅಂತ ಕೆಲವರಿಗೆ ಅನ್ನಿಸಿತು. ನೂರೆಂಟು ಗೋಳುಗಳು, ಕೊಲೆ,ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ನಿರಾಸೆ, ಕಾಮ, ಕೊಳಕು,ಚರಂಡಿ ಇವೂ ಬದುಕಿನಲ್ಲಿ ಇದ್ದೇ ಇವೆ. ನಾವು ಕಣ್ಣು ಮುಚ್ಚಿ ಕೂತರೂ ಈ ಕೆಟ್ಟದ್ದು, ಸುಂದರವಲ್ಲದ್ದು ಮಾಯವಾಗುವುದಿಲ್ಲ.

 ಇದರ ಬಗ್ಗೆಯೂ ಕವಿಗಳು ಬರೆಯಬೇಕು ಅನ್ನುವ ವಾದ ಹುಟ್ಟಿತು. ಕಾವ್ಯ ಸೂರಜ್ ಬರ್ಜಾತ್ಯ , ಕರಣ್ ಜೋಹರ್ ಚಿತ್ರದ ಹಾಗೆ ಇರಬೇಕಿಲ್ಲ, ಅದು ಅನುರಾಗ್ ಕಶ್ಯಪ್ , ಸೂರಿ ಸಿನಿಮಾದ ಹಾಗೂ ಇರಬಹುದು ಅನ್ನುವುದು ಇದರ ತಿರುಳು . ಇದಕ್ಕೆ ನವ್ಯ ಅಂತ ಹೆಸರು . ಕವಿತೆ ನರಮನುಷ್ಯರಿಗೆ ತಲೆ ಕೆಳಗಾಗಿ ನಿಂತರೂ ಅರ್ಥವಾಗದ ಹಾಗೆ ಕ್ಲಿಷ್ಟವಾಗಿ ಬರೆಯಬೇಕು ಅಂತಲೂ ನವ್ಯದ ಕೆಲವರು ಭಾವಿಸಿದರು, ಇರಲಿ . ಅಂತೂ ಈ ತರದ್ದನ್ನು ನವ್ಯ ಸಾಹಿತ್ಯ ಅನ್ನುತ್ತಾರೆ. ಸೆಖೆಗೆ ಅಂಗಿ ಕಿತ್ತು ಒಗೆಯುವ ಹಾಗೆ ಪ್ರಾಸ, ಛಂದಸ್ಸು ಇಂತದ್ದನ್ನೆಲ್ಲ ಕಿತ್ತೊಗೆದದ್ದೂ ಈ ನವ್ಯ ಶೈಲಿಯ ಭಾಗವೇ. ಒಂದು ರೀತಿಯಲ್ಲಿ ರಮೇಶ್ ಅರವಿಂದ್ ನಟನೆಯ ಶೈಲಿ ನವೋದಯ, ಸಾಯಿ ಕುಮಾರ್ ಶೈಲಿ ನವ್ಯ ಅನ್ನಬಹುದು!! ಈ ನವ್ಯ(Modernist) ಶೈಲಿಯಲ್ಲಿ ಮೆರೆದಾಡಿದ ಸೂಪರ್ ಸ್ಟಾರ್ ಕವಿ ಗೋಪಾಲಕೃಷ್ಣ ಅಡಿಗರು. ಅಡಿಗರು ಇಂಗ್ಲೀಷಿನಲ್ಲಿ ಬರೆದಿದ್ದರೆ ನೊಬೆಲ್ ಸಿಗುತ್ತಿತ್ತು ಅನ್ನಬಹುದಾದಷ್ಟು ಪ್ರತಿಭಾಶಾಲಿ. ಕಾವ್ಯದೇವತೆಯನ್ನು ಮನಬಂದಂತೆ ಕುಣಿಸಬಲ್ಲ ಶಬ್ದ ಮಾಂತ್ರಿಕರು. ಅಡಿಗರು ನವೋದಯದಲ್ಲೇ ಶುರು ಮಾಡಿ ನವ್ಯಕ್ಕೆ ಹೊರಳಿದವರು. ಅಡಿಗರು ರಮೇಶ್ ಶೈಲಿಯಲ್ಲಿ "ಹೂವಾಗಿ ತನ್ನೆದೆಯ ಮಧುರಮಕರಂದವನು ದಿಕ್ಕು ದಿಕ್ಕಿಗೆ ಚೆಲ್ಲುವಾಸೆ, ಮುಗಿಲಾಗಿ ಹನಿಯಾಗಿ ಜಗದ ಕಂಬನಿಯಾಗಿ ಮಣಿಯಾಗಿ ಕುಣಿಯುವಾಸೆ" ಯಂತಹ ಸಾಲುಗಳನ್ನೂ ಬರೆದಿದ್ದಾರೆ,  ಸಾಯಿಕುಮಾರ್ ಶೈಲಿಯಲ್ಲಿ "ಪರಾಕು ಪಂಪನ್ನೊತ್ತಿಯೊತ್ತಿ ನಡು ಬಗ್ಗಿರುವ ಬೊಗಳುಸನ್ನಿಯ ಹೊಗಳು ಭಟನಲ್ಲ"ದಂತಹ ಸಾಲುಗಳನ್ನೂ ಬರೆದಿದ್ದಾರೆ.  ವ್ಯಂಗ್ಯ, ತೀವ್ರತೆ, ನಾಟಕೀಯತೆ, ಅಬ್ಬರ ಅಡಿಗರ trademark.  ಸಾಯಿಕುಮಾರ್ ಶೈಲಿಯಲ್ಲಿ ಸಿದ್ಧಿ,ಪ್ರಸಿದ್ಧಿ ಪಡೆದಿದ್ದಾರೆ.

 ಅಡಿಗರ ಕಾದಂಬರಿಯೊಂದರ ಸಾಲುಗಳನ್ನು ಈ ನೋಡಿ :  ಅರಬ್ಬೀ ಸಮುದ್ರಕ್ಕೆ ಬಿಡುವಿಲ್ಲ . ಮಳೆಗಾಲ , ಚಳಿಗಾಲ , ಬೇಸಗೆಕಾಲ - ಹಗಲು, ಇರುಳು , ಪ್ರತಿನಿಮಿಷವೂ, ಅದು ಹುಚ್ಚೆದ್ದುಕೂಗಿ ರೇಗಿ ಸಾವಿರ ಸಿಂಹಗಳ ಗರ್ಜನೆಯಂತೆ, ಸಹಸ್ರಾರು ಆನೆಗಳು ಘೀಳಿಟ್ಟ ಹಾಗೆ  ಮೊರೆಯುತ್ತದೆ, ಬೊಬ್ಬಿಡುತ್ತದೆ, ಹೂಂಕರಿಸುತ್ತದೆ. ಈ ಬೊಬ್ಬಾಟಕ್ಕೆ ಕೊನೆಮೊದಲಿಲ್ಲ . ಯಾವ ದುಃಖಬಡಿದಿದೆ ಈ ಕಡಲಿಗೆ ? ಯಾವ ಆಕ್ರೋಶ ? ಯಾವ ನೋವು ? ಯಾರ ಚಿತ್ರಹಿಂಸೆ ? ಅಗೋ ಈಗ ವಿಕಟಾಟ್ಟಹಾಸ  -- ಅಲ್ಲಲ್ಲ, ಚೀತ್ಕಾರ -- ಪೂತ್ಕಾರ !

ನಾವು ನೀವಾದರೆ ಬರೀ ಅರಬ್ಬೀ ಸಮುದ್ರ ಜೋರಾಗಿ ಮೊರೆಯುತ್ತದೆ ಅಂತಂದು ಕೈ ತೊಳೆದುಕೊಳ್ತಾ ಇದ್ದೆವು, ಅಡಿಗರು ಇಷ್ಟು build up ಕೊಟ್ಟು  ನಾಟಕೀಯವಾಗಿ, ಅಬ್ಬರದಲ್ಲಿ ಹೇಳಿದ್ದಾರೆ. ಅಡಿಗರ ಶೈಲಿ ಇದು. ಅವರ ನವ್ಯ ಕವಿತೆಗಳು ಹೀಗಿರುತ್ತವೆ, ಕಡಲಿನ ಮೊರೆತದ ಹಾಗೆ ಮತ್ತು ಕಡಲಿನ ಮೊರೆತಕ್ಕೆ ಅವರು ಕೊಟ್ಟ ವಿವರಣೆಯ ಹಾಗೆ.

 ಪುಸ್ತಕಕ್ಕಿಂತ ಮುನ್ನುಡಿಯೇ ಉದ್ದವಾಯಿತು! ಮೋಹನ ಮುರಲಿ ಪದ್ಯವನ್ನು ಅಡಿಗರು ಬರೆದದ್ದು ಸಾಫ್ಟ್ ಆದ, ರೋಮ್ಯಾಂಟಿಕ್ ಆದ ನವೋದಯ ಶೈಲಿಯಲ್ಲಿ, ಮುಂದೆ ಅಬ್ಬರದ, ನಾಟಕೀಯಶೈಲಿ, ಎಲ್ಲವೂ ಸುಂದರವಲ್ಲ ಅನ್ನುವ ಶೈಲಿಗೆ ಹೋಗುವ ತಯಾರಿ ಇಲ್ಲಿ ಇದೆ. ಈಗ ಪದ್ಯ ಓದೋಣ :

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನದು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;
ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ
ಇಷ್ಟೆ ಸಾಕೆಂದಿದ್ದೆಯಲ್ಲೊ! ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.
ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಯಾವ ಮೋಹನಮುರಲಿ ಕೆರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿದ ಕೈಯನು?

 ಕಾರು, ಬಂಗಲೆ, ಪ್ರೇಮ-ಕಾಮ, ಮಾಲು,ಪಬ್ಬು ಸುತ್ತುವುದು ಇವುಗಳೇ ಜೀವನವೆಂದು ತಿಳಿದ ಮನುಷ್ಯ ಆಧ್ಯಾತ್ಮದತ್ತ ತಿರುಗುವುದರ (Spiritual awakening) ಚಿತ್ರಣ ಇಲ್ಲಿದೆ ಅನ್ನಬಹುದು.  ಆದರೆ ಅಷ್ಟೇ ಅಲ್ಲಅನ್ನುವುದೇ ಸ್ವಾರಸ್ಯ. ಕವಿತೆ ಹುಡುಗಿಯಂತೆ -  ಅರ್ಥ ಆದ ಹಾಗೂ ಇರಬೇಕು, ಇನ್ನೂ ಅರ್ಥ ಮಾಡಿಕೊಳ್ಳಬೇಕಾದ್ದು ತುಂಬಾ ಇದೆ ಅನ್ನಿಸುವ ಹಾಗೂ ಇರಬೇಕು. ತಿಳಿಯಿತು ಅನ್ನಿಸಬೇಕು, ಇನ್ನೂ ಹುಡುಕಿದರೆ ಇನ್ನಷ್ಟು ಅರ್ಥ ಹೊರ ಬರುವಂತೆ ಇರಬೇಕು, ಈ ಪದ್ಯ ಹಾಗೇ ಇದೆ.

ಮೊದಲ ಸಾಲುಗಳು : "ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನದು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?" ಮುರಳಿ ಅಥವಾ ಮುರಲಿ ಅಂದರೆ ಕೃಷ್ಣನ ಕೊಳಲಿನ ಪ್ರಸ್ತಾಪ ಬಂದಿದೆ, ಕೃಷ್ಣ ಯಾರು ? ಗೀತೆ ಬೋಧಿಸಿದವನು. ಇಲ್ಲಿ ಹೀಗೇ ಅಂತ ಹೇಳಿಲ್ಲ. ಪ್ರಶ್ನೆ ಹಾಕಿದ್ದಾರೆ. ಕವಿ ಸ್ವಲ್ಪ ದೂರದಲ್ಲಿ ನಿಂತು ತನ್ನ ಅನುಭವವನ್ನು ತಾನೇ ಪ್ರಶ್ನೆಮಾಡುತ್ತಾ ಇದ್ದಾರೆ. Dramatic monologue ಅನ್ನಬಹುದು. "ಈ ವೀಕೆಂಡಿನಲ್ಲಿ ಯಾವ ಮಾಲು ಕೈಬೀಸಿ ಕರೀತಾ ಇದೆ ನಿಮ್ಮನ್ನ ?" ಅಂತ ಕೇಳಿದ ಹಾಗೆ ನನ್ನನ್ನು ಕರೆದದ್ದು ಯಾರು ಅಂತ ಅರ್ಥ ಮಾಡಿಕೊಳ್ಳುವ ಪ್ರಯತ್ನ, ಕರೀತಾ ಇರುವುದು ಇಲ್ಲೇ ಎಲ್ಲಿಗೋ ಆಗಿದ್ದರೆ ಥಟ್ ಅಂತ ಹೋಗಬಹುದಿತ್ತು, ಆದರೆ ದೂರ ತೀರಕ್ಕೆ ಕರೀತಾ ಇರುವುದರಿಂದ ಸ್ವಲ್ಪ ಯೋಚನೆ ಮಾಡಬೇಕು. ಮಣ್ಣಿನ ಕಣ್ಣನು ಅಂದರೆಏನು ? Earthly eyes?  ನಾವು ಯಾರೋ ಮಾಡಿದ ಮಣ್ಣಿನ ಬೊಂಬೆಗಳು ಅಂತಲೇ ? ಕರೆಯುತ್ತಾ ಇರುವವನು ಗೊಂಬೆ ಆಡ್ಸೋನು ಇರಬಹುದೇ ?

 "ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ" ಅಂತೆ. ಇದು ಮಜಾ ಮಾಡಿಕೊಂಡು ತಿರುಗುತ್ತಿರುವವನ ಚಿತ್ರವೇ. ಹೂವಿನ ಹಾಸಿಗೆ ಮೇಲೆ ಪ್ರೇಯಸಿಯನ್ನು ಅಪ್ಪಿಮುದ್ದಾಡುತ್ತ ಇದ್ದಾನೆ ಈ ಆಸಾಮಿ, ಅಂತವನನ್ನು ದೂರ ತೀರಕ್ಕೆ ಬಾ ಅಂದರೆ ಬರುತ್ತಾನೆಯೇ? ಉತ್ತರ ಮುಂದಿನ ಸಾಲಿನಲ್ಲೇ ಇದೆ."ಬಯಕೆತೋಟದ ಬೇಲಿಯೊಳಗೆ ಕರಣಗಣದೀರಿಂಗಣ" ಅಂದಿದ್ದಾರೆ. ಈ ನಲ್ಲೆ, ಈ ರೋಮ್ಯಾನ್ಸ್ ಎಲ್ಲ  ಬೇಲಿ ಹಾಕಿದ ತೋಟ ಅನ್ನಿಸಿದೆ ಇವನಿಗೆ.  ಕರಣಗಣ ಅಂದರೆ ಇಂದ್ರಿಯಗಳ ಗಣ,ಸಮೂಹ,ಗುಂಪು. ರಿಂಗಣ ಎಂದರೆ ತಿರು ತಿರುಗಿಮಾಡುವ ಕುಣಿತ. ಯಕ್ಷಗಾನದಲ್ಲಿ ನೆಲ ಬಿಟ್ಟು ಹಾರಿ ಫ್ಯಾನು ತಿರುಗಿದ ಹಾಗೆ ಗರ ಗರ ತಿರುಗಿ ಕುಣಿಯುತ್ತಾರೆ. ತನ್ನ ಇಂದ್ರಿಯಗಳು ಈ ತರ ಕುಣೀತಾ ಇದೆ ಸ್ವಾಮೀ ಅಂತಾರೆ ಕವಿ(Dance of the senses). ಇದು ಒಂತರಾ ಜೈಲಿನಲ್ಲಿ ಸಿಕ್ಕಿ ಹಾಕಿಕೊಂಡ ಹಾಗೆ. ದಿನ ಬೆಳಗಾದರೆ ಅದೇ ಕಾರು, ಅದೇ ಆಫೀಸು, ಅದೇ ಬಾಸು, ಅದೇ ಟ್ರಾಫಿಕ್ಕು, ಅದೇ ಹುಡುಗಿ, ಅದೇ ಸೆಕ್ಸು ಎಲ್ಲ ಸೇರಿ ಒಂದು ಜೈಲಿನ ಹಾಗೆ ಅನ್ನಿಸಿದೆ ಇವನಿಗೆ. ಇಂದ್ರಿಯಗಳು ಅದೇ ತಾಳಕ್ಕೆ ತಿರು ತಿರುಗಿ ಕುಣಿಯುತ್ತಾ ಇವೆ ಅಷ್ಟೇ. ಇದೇ ಬೇಸರ ಆತನಿಗೆ. ಇದು ಬಿಟ್ಟು ಇದು ಬಿಟ್ಟು ಮಹತ್ವದ ಕೆಲಸ ಏನಾದರೂ ಮಾಡೋಣ ಅಂತಒಳಗೊಳಗೇ ಅನ್ನಿಸ್ತಾ ಇದೆ.  ಮುಂದಿನ ಸಾಲುಗಳಲ್ಲಿ ಬಾಯಿ ಬಿಟ್ಟು ಇದನ್ನೇ ಹೇಳಿದ್ದಾರೆ : ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ, ಇಷ್ಟೆ ಸಾಕೆಂದಿದ್ದೆಯಲ್ಲೊ! ಇಂದುಏನಿದು ಬೇಸರ?  ಮಿದುವೆದೆ = ಮೃದುವಾದ ಎದೆ , ಬಿಸಿದುಸೋಂಕಿನ ಅಂದರೆ ಬೆಚ್ಚಗಿನ ಸ್ಪರ್ಶದ. ಹುಡುಗಿಯ ಮೃದುವಾದ ಎದೆ, ಬೆಚ್ಚನೆಯ ಸ್ಪರ್ಶ ಇದೆಲ್ಲಾ ಪಂಜರ(Cage) ಅಂತೆ. ಆಗ ಬೇಲಿ ಹಾಕಿದ ತೋಟ ಅಂದಿದ್ದ, ಈಗ ನೋಡಿದರೆ ಪಂಜರ ! ಹೀಗೇ ಬಿಟ್ಟರೆ ಇನ್ನೂ ಏನೇನು ಹೇಳುತ್ತಾನೋ !

ಮುಂದೆ :"ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ? ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?" ಈತನ ಕಣ್ಣು ಉಪೇಂದ್ರ ಸಿನಿಮಾದಲ್ಲಿ ಉಪೇಂದ್ರನ ಪಾತ್ರದ ಕಣ್ಣು ತಿರುಗಿದ ಹಾಗೆ ಹೊರಳುತ್ತಾ ಇದೆ(Rolling eyes). ಕುಡಿದು ಟೈಟ್ ಆದವರಿಗೆ ಯಾವುದೂ ಸರಿಯಾಗಿ ಕಾಣದೆ ಆಗುತ್ತದಲ್ಲ, ಹಾಗಾಗಿದೆ ಇವನಿಗೆ, ಕಣ್ಣು ಸರಿ ಕಾಣದೆ ತೇಲುನೋಟ(Floating glance) ಆಗಿದೆ. ಯಾತನೆ, ನೋವು ಆಗುತ್ತಾ ಇದೆ, ಆದರೆ ಸುಮಧುರವಾದ, ಖುಷಿ ಕೊಡುವಂತ ನೋವು,ತೊಳಲಾಟ ಇದು. ದಿವ್ಯ ಅಂದರೆ ಸ್ವರ್ಗಕ್ಕೆ ಸಂಬಂಧಿಸಿದ ಅಂತ ಒಂದು ಅರ್ಥ, divine ಅಂದಂತೆ. ಒಬ್ಬರು ತಪ್ಪು ಮಾಡಿದ್ದಾರೋ ಇಲ್ಲವೋ ಅಂತ ನಿರ್ಣಯ ಮಾಡುವ ಪರೀಕ್ಷೆಗೂ ದಿವ್ಯ ಅನ್ನುತ್ತಾರೆ . ತುಲಾ, ಅಗ್ನಿ, ಜಲ, ತಂಡುಲ ಇತ್ಯಾದಿ ಏಳು ಬಗೆಯ ದಿವ್ಯಗಳು ಇವೆ.ಅಗ್ನಿದಿವ್ಯ ಅಂದರೆ ಅಗ್ನಿಪರೀಕ್ಷೆ ಅನ್ನುವ ಶಬ್ದ ಕೇಳಿಯೇ ಇರುತ್ತೀರಿ. ಈತನಿಗೂ ಇದು ಪರೀಕ್ಷೆಯೇ.  ಈತ ಸಂಸಾರದಲ್ಲಿ ಸಿಕ್ಕಿಕೊಂಡಿದ್ದಾನೆ , ಸ್ವರ್ಗದ ಕರೆ ಬಂದಿದೆ(Divine calling), ಹೋಗೋಣವೇ ಬೇಡವೇ ಗೊತ್ತಾಗುತ್ತಿಲ್ಲ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಅನ್ನುವ ಪರಿಸ್ಥಿತಿ!

 ಆಮೇಲೆ : "ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ; ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ". ಮರವನ್ನು ಮುಟ್ಟಿ ನೋಡಿದರೆ ತಣ್ಣಗೆ ಇರುತ್ತದೆ, ಬೆಂಕಿ ತಾಗಿಸಿ ನೋಡಿ  - ಭಗ ಭಗ ಉರಿಯುತ್ತದೆ. ಈ ಬೆಂಕಿ ಎಲ್ಲಿತ್ತು ? ಮರದೊಳಗೆ ಅಡಗಿತ್ತು, ಈಗ ಏನೋ ತಾಕಿದಾಗ ಹೊರಬಂತು. ಹಾಗೆಯೇ ಈ ಮನುಷ್ಯನಿಗೂ ಒಳಗೊಳಗೇ ಬೇಸರ ಇತ್ತು, ಏನಾದರೂ ಕಡಿದು ಕಟ್ಟೆ ಹಾಕಬೇಕು, ಸಾಧಿಸಬೇಕು ಅನ್ನುವ ತುಡಿತ ಇತ್ತು, ಅದು ಮನದ ಒಳಗೆ ಇದ್ದದ್ದು ಈಗ ಹೊರಗೆ ಬಂದಿದೆ.  ಇದರ ಮುಂದುವರಿಕೆಯಾಗಿ "ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?" ಅನ್ನುತ್ತಾರೆ. ಸುಪ್ತ ಅಂದರೆ ಅಡಗಿದ, ಸುಪ್ತ ಸಾಗರ ಅಂದರೆ ಒಳ ಮನಸ್ಸು (Subconscious mind). ಏಳು ಸಮುದ್ರ ದಾಟಿದ ರಾಜಕುಮಾರನ ತರ ಏಳು ಕಡಲು ದಾಟಿದರೆ ಅಲ್ಲಿ ಒಳ ಮನಸ್ಸು ಅನ್ನುವ ಇನ್ನೊಂದು ಸಮುದ್ರ ಸಿಗುತ್ತದೆ, ಅದನ್ನು ದಾಟುವುದು ಹೇಗೆ ? ಮೊಳೆಯದಲೆ ಅಂದರೆ ಮೂಡದ, ಭೋರ್ಗರೆಯದೆ ಇರುವ ಅಲೆ, ಮರ್ಮರ ಅಂದರೆ ಪಿಸುಗುಟ್ಟುವುದು,whispering. ಒಳ ಮನಸ್ಸಿನ ಪಿಸುಗುಟ್ಟುವಿಕೆ ಈಗ ಕೇಳುತ್ತಾ ಇದೆ ಈತನಿಗೆ . ಆಧ್ಯಾತ್ಮ ಕರೀತಾ ಇದೆ material comforts ಹೋಗಬೇಡ ಅನ್ನುತ್ತಾ ಇದೆ, ಒಳ ಮನಸ್ಸು ಏನು ಹೇಳ್ತಾ ಇದೆ ಅಂತ ಗೊತ್ತಾಗುತ್ತಿಲ್ಲ.

"ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ" ಅನ್ನುತ್ತಾನೆ . ವಿವಶ ಆಗುವುದು ಅಂದರೆ ಗೊತ್ತಾಗದಂತೆ ಮನ ಅಂಕೆ ತಪ್ಪಿ ಯಾವುದೋ ಆಮಿಷಕ್ಕೆ ಬಲಿಯಾಗುವುದು, ಪರವಶ ಆಗುವುದು ಅಂದರೆ ಗೊತ್ತಿದ್ದೂ ಮನವನ್ನು ಪರರ ಅಂಕೆಗೊಪ್ಪಿಸುವುದು. ಅದೊಂದು ಅಮಲಿನ ಭಾವ. ಅರ್ಧ ನಿದ್ರೆಯೂ ಅಲ್ಲದ ಅರ್ಧ ಎಚ್ಚ್ರರವೂ ಅಲ್ಲದ ಸ್ಥಿತಿ, ಗಾಂಜಾ ಸೇವಿಸಿದ ಹಾಗೆ ಆಗಿದೆ ಈತನ ಸ್ಥಿತಿ . ಆಧ್ಯಾತ್ಮದ, ಕೃಷ್ಣನ ಕರೆ ಇವನಿಗೆ ಅಮಲೇ ಹಿಡಿಸಿದೆ. ನಿಧಾನಕ್ಕೆ ಒಳ ಮನಸ್ಸಿನಲ್ಲಿ ಮೂಡದ ಅಲೆಯಾಗಿ, ಮೂಕವಾಗಿ ಇದ್ದದ್ದು ಈಗ ಕುಣಿ ಕುಣಿದು ಹೊರಗೆ ಬರುತ್ತಾ ಇದೆ.

ಈಗ twist ಬರುತ್ತದೆ. ಆಯಿತು, ಈ ಪುಣ್ಯಾತ್ಮ gone case, ಸನ್ಯಾಸಿ ಆಗಿ ಹಿಮಾಲಯಕ್ಕೆ ಹೊರಟ ಅನ್ನುವಷ್ಟರಲ್ಲಿ ಒಮ್ಮೆಲೇ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆಜೀವನ?" ಅನ್ನುವ ಸಾಲು ಬರುತ್ತದೆ. ಮಿಲನ ಮಹೋತ್ಸವದ ತುತ್ತ ತುದಿಯ ಹಾಗೆ, orgasmic ಆಗಿ ಈ ಸಾಲು ಬರುತ್ತದೆ. ಹೊರಟವನಿಗೆ ಮತ್ತೆ ಸಂದೇಹ ಬಂದಿದೆ , ಪ್ರಶ್ನೆ ಎದ್ದಿದೆ!!ಈಗ ಇದು ಬರೀ ಹಿಮಾಲಯಕ್ಕೆ ಹೊರಟವನ ಪದ್ಯ ಅಲ್ಲ. ಇರುವುದನ್ನು ಬಿಟ್ಟು ಹೊರಟ ಯಾರಿಗೇ ಆದರು ಅನ್ವಯ ಆಗುವ ಪದ್ಯ ಇದು.

ಒಬ್ಬ ಸಾಫ್ಟ್ ವೇರ್ ಎಂಜಿನಿಯರ್ ಇದ್ದಾನೆ,ಅವನಿಗೆ ಸ್ವಂತದ್ದೊಂದು ತೋಟವೋ, ವ್ಯಾಪಾರ ಮಾಡಬೇಕು ಅಂತ ಒಳಗೇ ಆಸೆ. ಅಥವಾ Startup ಕಂಪನಿ ಶುರು ಮಾಡುವ ಆಸೆ. ಈ ಕಂಪನಿ ಶುರು ಮಾಡುವ ಆಸೆ = ಮೋಹನಮುರಳಿಯ ಕರೆ  = ಆಧ್ಯಾತ್ಮದ ಕರೆ ಅಂತ ಇಟ್ಟುಕೊಂಡು ಈ ಪದ್ಯವನ್ನ ಇನ್ನೊಂದು ಸಲ ಓದಿ. ಮರದೊಳಡಗಿದ ಬೆಂಕಿ = ಆತನ ಆಸೆ. ಇರುವ ಸಂಬಳ ಭದ್ರತೆ(job security) ಬಿಟ್ಟು ಸ್ಟಾರ್ಟ್ ಅಪ್ ಶುರು ಮಾಡಿ ದಿವಾಳಿಯಾದರೆ ? ಶುರು ಮಾಡಲೇ ಬೇಡವೇ ಅನ್ನುವ ಗೊಂದಲ, ತಳಮಳ ಈ ಪದ್ಯದಲ್ಲಿ ಅದ್ಭುತವಾಗಿ ಬಂದಿದೆ ಅನ್ನಬಹುದು. The poem suits that scenario perfectly.  ಇನ್ನೊಬ್ಬನಿಗೆ ಸಿನಿಮಾ/ಕಲೆ ಅಂದರೆ ಹುಚ್ಚು. ಇರುವ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಹೋಗೋಣ ಅಂತಿದ್ದಾನೆ. ಸಿನಿಮಾದ, ಕಲೆಯ passion = ಮೋಹನಮುರಳಿಯ ಕರೆ  = ಆಧ್ಯಾತ್ಮದ ಕರೆ ಅಂತ ಓದಿಕೊಂಡರೆ ಈ ಕವಿತೆ ಆ ಸಂಧರ್ಭಕ್ಕೂ ಪರ್ಫೆಕ್ಟ್. ಈ ಪ್ಯಾಶನ್ ಮರದೊಳಡಗಿದ ಬೆಂಕಿಯಂತೆ ಇವನ ಒಳಗೇ ಇತ್ತು ಅನ್ನುವ ಹೋಲಿಕೆಎಷ್ಟು ಚೆನ್ನಾಗಿ ಹೊಂದಿಕೆ ಆಗುತ್ತದೆ !! ಈಗ ಇರುವ ಸಂಬಳ , ಸವಲತ್ತುಗಳು = ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ. ಈ ರೀತಿ ಓದಿಕೊಳ್ಳಬಹುದು.

ದೇಶ ಬಿಟ್ಟು ಅಮೇರಿಕಾಕ್ಕೆ ಹೊರಟು ನಿಂತವನು ಅಮೇರಿಕಾ Calling =  ಮೋಹನ ಮುರಳಿಯ ಕರೆ ಅಂತ ಮಾಡಿಕೊಂಡರೆ, ಅವನ ಸಂಕಟಗಳ ಬಗ್ಗೆಯೇ ಬರೆದ ಹಾಡು ಇದು ಅನಿಸುತ್ತದೆ. It is as if the song is about someone leaving one’s own shores and heading towards a promised land of plenty!  ಒಬ್ಬ ತನ್ನ girlfriend ಅನ್ನು dump ಮಾಡಿ ಹೊರಟಾಗ ಅವಳು ಹಾಡಿದ ಹಾಡು ಅಂತಲೂ ಹೇಳಬಹುದು. ಈ ತರ ಬೇರೆ ಬೇರೆ ಸಂಧರ್ಭ, ಥೀಮ್ ಇಟ್ಟುಕೊಂಡು ಓದಿದರೆ ಈ ಪದ್ಯ ಎಲ್ಲಅರ್ಥಗಳಿಗೂ ಹೊಂದಿಕೆ ಆಗುತ್ತದೆ ಅನ್ನಿಸಿಬಿಡುತ್ತದೆ!!  ಯಾರಾದರೂ ಸತ್ತಾಗ, ಅವರನ್ನು ಮೋಹನ ಮುರಲಿ ದೂರ ತೀರಕ್ಕೆ ತಗೊಂಡು ಹೋಯಿತು ಅಂತ ಬೇಸರದಲ್ಲೂಹಾಡಿಕೊಳ್ಳಬಹುದು. ಈ universality ಇದರ ವಿಶೇಷ. ಎಲ್ಲ ಒಳ್ಳೆಯ ಕವಿತೆಗಳೂ ಹೀಗೆ universal ಆಗಿರುತ್ತವೆ.

The grass is always greener on the other side ಅನ್ನುವ ಹಾಗೆ, ಏನು ಇದ್ದರೂ ಇನ್ನೂ ಏನನ್ನೋ ನೋಡಿ, ಅದು ಸಿಕ್ಕಿದರೆ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುವುದು ನಮ್ಮ ಗುಣ.ನಡೆಯುವಾಗ ಬೈಕು ಬೇಕು, ಬೈಕು ಸಿಕ್ಕಿದರೆ ಕಾರು , ಕಾರು ಬಂದ ಮೇಲೆ ಬಂಗಲೆ. ಇದು ಮುಗಿಯುವುದೇ ಇಲ್ಲ. ಉಡುಪಿಯಲ್ಲಿ ಕೂತವನಿಗೆ ಅಮೆರಿಕಕ್ಕೆ ಹೋಗೋಣ ಅನ್ನುವ ಆಸೆ, ಟೆಕ್ಸಾಸ್ ನಲ್ಲಿ ತಿರುಗುವವನಿಗೆ ಉಡುಪಿಗೆ ಹೋಗುವ ಬಯಕೆ !!  "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?" ಅನ್ನುವ ಸಾಲು ಇದನ್ನೂ ಸೊಗಸಾಗಿ ಹಿಡಿದಿಡುತ್ತದೆ. ಕೊನೆಯ ಎರಡು ಸಾಲುಗಳು, "ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?

ಯಾವ ಬೃಂದಾವನವು ಚಾಚಿತು ತನ್ನ ಮಿಂಚಿದ ಕೈಯನು?" ಇದು ಮೊದಲ ಎರಡು ಸಾಲುಗಳ copy pasteನಂತಿದೆ.  ಕರೆಯುವ ಕೈ ಅನ್ನು "ಮಿಂಚಿದ ಕೈ" ಅಂತ ಸೇರಿಸಿದ್ದಾರೆ. ಮಿಂಚುಇರುವುದು ಒಂದೇ ಕ್ಷಣವಾದರೂ ಅದರ ಶಕ್ತಿ ಭಯಂಕರ, ಆಕರ್ಷಣೆಯೂ . ಕಡೆಗೆ ಭಾಷೆಯ ವಿಚಾರ, ಕವಿತೆಯಲ್ಲಿ ಹೇಳಿದ್ದು ಸಂಭಾಷಣೆಯಲ್ಲಿ ಹೇಳಲಾಗದ ಹಾಗೆ ಇರಬೇಕು. ಇದನ್ನು ನೋಡಿ :
"ಹೇಗಿದ್ದೀಯಾ ? ತೊಂದ್ರೆ ಏನೂ ಆಗಿಲ್ಲ ತಾನೇ? ಸುಖವಾಗಿ ಇದ್ದೀಯಾ ? ನಾನು ಬರ್ದಿರೋ ಕಾಗದ ಓದಿದ್ಯಾ ಡಾರ್ಲಿಂಗ್ ?" ಇದನ್ನೇ ಹೀಗೆ ಬರೆದರೆ ಕವಿತೆ ಆಗುತ್ತದೆ:

ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿ ಪಾತ್ರಳೇ
ಓದಮ್ಮಾ ನನ್ನ ಓಲೇ

ಕವಿತೆಗೆ ಬೇರೆಯೇ ತರದ ಭಾಷೆ ಬೇಕು. ಲಯ ಬೇಕು. ಅಡಿಗರ ಭಾಷೆ,ಲಯ ನೋಡಿ. ಅಡಿಗರು ಹಿಮಗಿರಿಯ ಕಂದರ ಅನ್ನುವ ಕವಿತೆಯಲ್ಲಿ ಇದೇ ಥೀಮ್ ಅನ್ನು ವ್ಯಂಗ್ಯ, ಅಬ್ಬರ ನಾಟಕೀಯತೆಯೊಂದಿಗೆ ಸಾಯಿಕುಮಾರ್ ಶೈಲಿಯಲ್ಲಿ  revisit ಮಾಡಿದ್ದಾರೆ. ಭೈರಪ್ಪ ಬರೆದಿರುವ ನಿರಾಕರಣ ಕಾದಂಬರಿಯಲ್ಲಿಯೂ ಇದೇ ಥೀಮ್ ಇದೆ. ಆಸಕ್ತರು ಓದಿ ನೋಡಿ. ಹೀಗೆ ಸರಳವಾದರೂ ತುಂಬಾ ಅರ್ಥ ಇಟ್ಟುಕೊಂಡು ನವ್ಯದ ಕಡೆ ಹೊರಟ ಅಡಿಗರ ಶ್ರೇಷ್ಟ ನವೋದಯ ಕವಿತೆ ಇದು ಅಂತ ನಿಸ್ಸಂಶಯವಾಗಿ ಹೇಳಿ ಮುಗಿಸೋಣ.    

ಕನ್ನಡಕ್ಕೊಬ್ಬರೇ ಬೀಚಿ

ಇವತ್ತು ಬೀchi ಅವರ ಹುಟ್ಟು ಹಬ್ಬವಂತೆ. ಬೀchi(ಪಾರ್ಥಸಾರಥಿ ಪಾಚು ಆಗುವಂತೆ ಬಳ್ಳಾರಿ ಭೀಮಸೇನರಾವ್ ಬೀಚಿ ಆಗಿದೆ ) !! ಹೆಸರು ಕೇಳಿದರೆ ಮುಖ ಅರಳುತ್ತದೆ, ತುಟಿಯ ಅಂಚಿನಿಂದ ನಗೆಹೂವು ಬಿರಿಯುತ್ತದೆ. ನನಗೆ ಬುದ್ದಿ ಬಂದಾಗಿಂದ ನಾನು ಹುಡುಕಿ ಹುಡುಕಿ ಓದಿದ್ದು ಅಂತಿದ್ದರೆ ಈ ಮಹಾಮಹಿಮರ ಪುಸ್ತಕಗಳನ್ನೇ ("ಬುದ್ದಿ ಬಂದ ಮೇಲೆ" ಅನ್ನುವ ಪ್ರಯೋಗದ ಬಗ್ಗೆ ಬೀchiಯವರದ್ದೇ ಒಂದು ಚಟಾಕಿ : ಕೆಲವರು "ನನಗೆ ಬುದ್ದಿ ಬಂದ ಮೇಲೆ" ಎಂದು ಮಾತು ಆರಂಭಿಸುತ್ತಾರೆ. "ಯಾವಾಗ ಬಂತು ನಿಮಗೆ ಬುದ್ದಿ?" ಎಂದು ಕೇಳಿದರೆ ಜಗಳ ಆರಂಭ). ಬೀchi ಅವರ ಬಗ್ಗೆ ಬರೆಯುವುದು ಅಂದರೆ ಗುಲಾಬ್ ಜಾಮೂನಿನ ಬಗ್ಗೆ ಭರತ ನಾಟ್ಯ ಮಾಡಿದ ಹಾಗೆ!! ಅದರ ರುಚಿಯನ್ನು ಓದಿಯೇ ಸವಿಯಬೇಕು.

ಅಬ್ಬಾ !! Beechi ಬರೀತಿದ್ದ ಗೇಲಿ, ತಮಾಷೆ , ಹಾಸ್ಯ , ವ್ಯಂಗ್ಯ, ಕುಟುಕು, ವಿಡಂಬನೆ ತುಂಬಿದ ಬರಹಗಳನ್ನ ಓದೋ ಮಜಾನೇ ಬೇರೆ. ಒಂದು ಬಂಡೆ ಕಲ್ಲು ಕೊಟ್ಟರೆ ಆ ಕಲ್ಲಿನ ಬಗೆಗೂ ತಮಾಷೆ ಮಾಡಬಲ್ಲಷ್ಟು ಪ್ರತಿಭಾಶಾಲಿ ಬೀchi (ವಿಡಂಬನ ಸಾಹಿತ್ಯವನ್ನೂ ಬಿಡದೆ ಕಾಲೆಳೆದಿದ್ದಾರೆ ಬೀಚಿ: 'ವಿಡಂಬ'ನ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ 'ವಿಡಂಬ' ಎಂಬುವವನು). ನನ್ನ ಮಟ್ಟಿಗೆ ಸಾಹಿತ್ಯ ದೇವಿಯ ಗುಡಿಯಲ್ಲಿ ಚಿರಕಾಲ ಉಳಿಯುವ ನಂದಾದೀಪಗಳನ್ನು ಹೊತ್ತಿಸಿದವರು ಇಬ್ಬರು: ಬೀಚಿ ಮತ್ತು ನಾ. ಕಸ್ತೂರಿ. ಕನ್ನಡದ ಶ್ರೇಷ್ಟ ಹಾಸ್ಯ ಲೇಖಕರ ಪಟ್ಟಿ ಅಂತ ಮಾಡಿದರೆ ಈ ಎರಡು ಹೆಸರುಗಳು ಬರಲೇ ಬೇಕು. ನನ್ನ ಪಟ್ಟಿಯಲ್ಲಿ ಪಡುಕೋಣೆ ರಮಾನಂದರಾಯ, ಅರಾ ಮಿತ್ರ, ಭುವನೇಶ್ವರಿ ಹೆಗಡೆ , ರಾಶಿ, ನಾಡಿಗೇರ ಕೃಷ್ಣ ರಾಯರು, ಟಿ ಎಸ್ ಅಂಬುಜಾ, ಪಾವೆಂ ಆಚಾರ್ಯ ಎಲ್ಲ ಬರುತ್ತಾರೆ. ಯಾರು ಬರುತ್ತಾರೋ ಬಿಡುತ್ತಾರೋ ಬೀchi ಅಂತೂ ಇದ್ದೇ ಇರುತ್ತಾರೆ ವಿರಾಜಮಾನರಾಗಿ. ಬಳ್ಳಾರಿಯಲ್ಲಿ ಇರುವುದು ಎರಡೇ ಕಾಲ ಒಂದು ಬೇಸಿಗೆ. ಮತ್ತೊಂದು ಬಿರು ಬೇಸಿಗೆ ಅನ್ನುವುದು ಬೀchi ಯವರದೇ ಮಾತು. ಬೀಚಿಯವರನ್ನು ಓದಿದವರು ಮಾಡುವುದು ಎರಡೇ ಕೆಲಸ: ನಗುವುದು ಮತ್ತು ಇನ್ನಷ್ಟು ನಗುವುದು.

ಹಾಗಂತ ಬರೀ ಜೋಕು ಹೊಡೆದು ಟೈಮ್ ಪಾಸ್ ಮಾಡುವುದೇ ಬೀchiಯವರ ಗುರಿಯಲ್ಲ. ಸಮಾಜದ ಒರೆ ಕೋರೆ ಗಳನ್ನು ತಿದ್ದುವ, ತಪ್ಪುಗಳನ್ನು, ಅನ್ಯಾಯವನ್ನು, ಮೂಡ ನಂಬಿಕೆಗಳನ್ನು ಬೆದಕಿ, ಚುಚ್ಚಿ, ಕೆಣಕಿ, ಗೇಲಿ ಮಾಡಿ ಸಮಾಜ ಸುಧಾರಣೆ ಮಾಡುವ ವಿಚಿಕಿತ್ಸಕ ದೃಷ್ಟಿ ಅವರದ್ದು. "ಸಂಪ್ರದಾಯ ಎಂಬುದು ಒಂದು ದಾರಿಯನ್ನು ತೊರಿಸುತ್ತದೆ ಮಾತ್ರ, ಬೆತ್ತವನ್ನು ಹಿಡಿದು ನಿಂತು ಈ ದಿಕ್ಕಿಗೆ ಹೋಗು ಎಂದು ಹೇಳುವ ಅಧಿಕಾರ ಅದಕ್ಕಿಲ್ಲ" ಅನ್ನುವ ಸಾಲು ಅಥವಾ "ಬಹುಜನ ಮಾಡುತ್ತಿದ್ದಾರೆಂಬ ಏಕ ಮಾತ್ರ ಕಾರಣದಿಂದಲೇ, ಅನೇಕ ತಪ್ಪುಗಳನ್ನು ನಾವಿಂದು ತಪ್ಪೆಂದು ಅನ್ನುತ್ತಿಲ್ಲ.ಇದು ನಮ್ಮ ತಪ್ಪು" ಮಾತುಗಳಲ್ಲಿ ಈ ಜೋಕ್ ಮಾಡುತ್ತಲೇ ವಿಚಾರದ ಬೀಜ ಬಿತ್ತುವ ಕ್ರಮ ಕಾಣುತ್ತದೆ. ಗಂಭೀರವಾದ ವಿಚಾರಗಳನ್ನು ತಿಳಿಹಾಸ್ಯ ದೊಂದಿಗೆ ಹೇಳುವ ಶೈಲಿಗೆ ಅವರ "ಪೊರಕೆಗೆ ಏನು ಕಂಡರೂ ಕಸವಾಗಿಯೇ ಕಾಣುತ್ತದೆ. ಪೊರಕೆಯ ಯೋಗ್ಯತೆಯೇ ಅಷ್ಟು" ಅನ್ನುವ quote ಹೇಳಬಹುದು ಅಥವಾ ಈ ಸಾಲುಗಳನ್ನೂ ನೋಡಬಹುದು:
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ

ಬೀಚಿ ಕೋಟ್ ಗಳ ಕೋಟೆ ಕಟ್ಟಿ ಮೆರೆದ ಕೋಟೇಶ್ವರ ಸಾಮ್ರಾಟ, ಮಹಾ ಚಕ್ರವರ್ತಿ ಅನ್ನಬೇಕು. ಮೇಲೆಯೇ ಕೆಲವನ್ನು ಕೊಟ್ಟಿದ್ದೇನೆ. ಮಳೆಗಾಲದಲ್ಲಿ ಜೋಗದಲ್ಲಿ ಧುಮ್ಮಿಕ್ಕಿ ಹರಿಯುವ ಜಲರಾಶಿಯಂತೆ ಬೀಚಿ ಬರಹಗಳಲ್ಲಿ quotable quoteಗಳ ರಾಶಿಯೇ ಸಿಗುತ್ತದೆ. ಈ ಮಟ್ಟಿಗೆ ಕನ್ನಡದ ಮಾರ್ಕ್ ಟ್ವೈನ್, George Bernard SHaw, Oscar Wilde ಎಲ್ಲವೂ ಇವರೇ. ಉದಾಹರಣೆಗಳು :
ಸತ್ಯವನು ಅರಿತವನು ಸತ್ತಂತೆ ಇರಬೇಕು
ಗೆಳೆಯನನ್ನು ಉಪ್ಪಿನಂತೆ ಬಳಿಸಬೇಕು, ಸಕ್ಕರೆಯಂತೆ ಸುರುವಿಕೊಳ್ಳಬಾರದು
ಚುನಾವಣೆಯಲ್ಲಿ ಜಯ ದೊರಕುವುದು ಪಕ್ಷಕ್ಕಲ್ಲ, ವ್ಯಕ್ತಿಗಲ್ಲ, ದ್ವೇಷಕ್ಕೆ!
ವಾರದಲ್ಲಿ ಮೂರು ದಿನಗಳಾದರೂ ನಗುತ್ತ ಇರಬೇಕು - ನಿನ್ನೆ, ಇವತ್ತು ಮತ್ತು ನಾಳೆ
ಸೂರ್ಯನೂ ತಂಣಗಾಗುತ್ತಿದ್ದ, ಅವನಿಗೊಂದು ಹೆಂಣು ಗಂಟು ಬಿದ್ದಿದ್ದರೆ.
ಅಭಿಪ್ರಾಯಗಳು ಮಕ್ಕಳಿದ್ದಂತೆ - ನಮ್ಮವು ನಮಗೇ ಚೆಂದ
ಆಳವು ಕಡಿಮೆಯಾದಂತೆಲ್ಲಾ ಉದ್ದದಲ್ಲಿ ಜಾಸ್ತಿಯಾಗುವಂತಹ ರಬ್ಬರ್ ನಂತಹುದಕ್ಕೆ ಭಾಷಣ ಎಂದು ಹೆಸರು
MA ಮತ್ತು MLAಗಳ ನಡುವಿನ ವ್ಯತ್ಯಾಸವೇನು?
> ಎಮ್ಮೆ ನಿಂತಲ್ಲೇ ಮೇಯುತ್ತದೆ, ಎಂಎಲ್‌ಎ ಊರೆಲ್ಲ ಮೇಯುತ್ತಾನೆ
"ಒಳ್ಳೆಯವರು ಎನ್ನಿ ಸಿಕೊಂಡವರು ಇನ್ನೂ ಒಳ್ಳೆಯವರಾಗೇ ಇದ್ದಾರೆ ಅಂದರೆ ಅವರಿಗೆ ಇನ್ನೂ ಭ್ರಷ್ಟರಾಗುವ ಅವಕಾಶ ಸಿಕ್ಕಿಲ್ಲ ಎಂಬುದೇ ಕಾರಣ" ಎನ್ನುವ ಸಾಲು ನೋಡಿ, The Dark Knight ಚಿತ್ರದ You either die a hero, or you live long enough to see yourself become the villain ಅನ್ನುವ ಸಾಲು ನೆನಪಾಗುವುದಿಲ್ಲವೇ ?

ಕನ್ನಡದಲ್ಲಿ ಬರೆಯುವುದು ಓದುವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆ ಬೀಚಿಯವರಿಗೆ ಇತ್ತಂತೆ. ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರಂತೆ . ಇಂಗ್ಲಿಷ್ ಪುಸ್ತಕ ಪ್ರೇಮಿಯಾಗಿದ್ದ ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ. “ಒಂದು ಕನ್ನಡದ ಪುಸ್ತಕ ಕೊಡಿ. ಯಾವುದಾದರೂ ಚಿಂತೆಯಿಲ್ಲ. ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ. ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ! ಅಂಗಡಿಯವರು ಸಾಹಿತ್ಯ ಪ್ರೇಮಿಯೇ, ಅವರು ಕೊಟ್ಟದ್ದು ಅನಕೃ ಅವರ ಸಂಧ್ಯಾರಾಗ. ಮರುದಿನ ರೈಲು ಪ್ರಯಾಣವಿತ್ತಂತೆ. ಕನ್ನಡ ಪುಸ್ತಕ ಓದಿದರೆ ಮರ್ಯಾದೆ ಹೋದೀತು ಅಂತ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರಂತೆ. ಕನ್ನಡಿಗರು ಈ ಪುಸ್ತಕಕ್ಕೆ ಥ್ಯಾಂಕ್ಸ್ ಹೇಳಲೇ ಬೇಕು. ಥಳುಕು ಬಳುಕಿನ ಹುಡುಗಿಗೆ ಪ್ರಾಯದ ಯುವಕ ಬೀಳುವಂತೆ ಆ ಪುಸ್ತಕಕ್ಕೆ ಬಿದ್ದ ಬೀchi ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಆಮೇಲೆ ಅದೇ ಅನಕೃ ಅವರ ಜೊತೆ ಹಳ್ಳಿ ಹಳ್ಳಿಗಳಿಗೆ ತಿರುಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ಪರ ಜಾಗೃತಿ ಮೂಡಿಸುವ ಭಾಷಣಗಳನ್ನೂ ಮಾಡಿದರು. "ತಂದೆ ಮಾಡಿದಂತೆ ಮಗನೂ ತಪ್ಪು ಮಾಡುತ್ತಾನೆ. ತಪ್ಪು ಮಾಡುವುದು ಮಾನವ ಜನ್ಮಸಿದ್ದವಾದ ಹಕ್ಕು. ಆದರೆ ತಂದೆ ಮಾಡಿದ ತಪ್ಪನ್ನೇ ಮಗನೂ ಏಕೆ ಮಾಡಬೇಕು? ಈ ಎಬಡಾ ಜಗತ್ತಿನಲ್ಲಿ ತಪ್ಪುಗಳಿಗೂ ಬಡತನವೇ? ತಪ್ಪುಗಳಲ್ಲಿ ವೈವಿಧ್ಯತೆ ಇಲ್ಲವೇ, ಮಾಡಬೇಕೆನ್ನುವ ಮಗನಿಗೆ? " ಎಂಬ ತನ್ನದೇ ಸಾಲುಗಳಂತೆ ಯಾರನ್ನೂ ಅನುಕರಿಸದೆ ತಮ್ಮದೇ ಆದ ಬೀಚಿ ಸ್ಟೈಲ್ ಸೃಷ್ಟಿ ಮಾಡಿದರು.

ಮಾತ್ರೆಗಳು, ಹುಚ್ಚು ಹುರುಳು, ಮಾತನಾಡುವ ದೇವರುಗಳು , ಆರು ಏಳು ಸ್ತ್ರೀ ಸೌಖ್ಯ, ಕನ್ನಡ ಎಮ್ಮೆ, ತಿಂಮಿಕ್ಷನರಿ ಇವೆಲ್ಲ ಅವರ ಅತ್ತ್ಯುತ್ತಮ ಕೃತಿಗಳು. ಬೆಳ್ಳಿ ತಿಂಮ ೧೦೮ ಮತ್ತು ತಿಂಮನ ತಲೆ ಅಲ್ಲಿಲ್ಲಿಂದ ಆಯ್ದ ಜೋಕುಗಳ ಸಂಗ್ರಹಗಳು. ಜೋಕು ಸ್ವಂತದ್ದಲ್ಲವಾದರೂ ನಿರೂಪಣೆಯ ಸೊಗಸಿಗೆ ಮರುಳಾಗಲೇ ಬೇಕು. ತಿಂಮಿಕ್ಷನರಿ ತಮಾಷೆಯ, ಅಣಕದ ಡಿಕ್ಷನರಿ, ನಾ ಕಸ್ತೂರಿಯವರ ಅನರ್ಥಕೋಶ ಇದ್ದಂತೆ. ಅದರಲ್ಲಿ ನನಗೆ ನೆನಪಿರುವುದು "ಇತ್ಯಾದಿ" ಶಬ್ದದ ಡೆಫಿನಿಷನ್. ಇತ್ಯಾದಿ - ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ. ಮತ್ತೊಂದು : ಸಿಗರೇಟು - ಸದ್ಬ್ರಾಹ್ಮಣ ಕುಟುಂಬಕ್ಕೆ ಸೇರಿದುದು - ದಹನವೇ ಇದಕ್ಕೆ ಅಂತ್ಯ ಸಂಸ್ಕಾರ. ನನಗೆ ನೆನಪಿರುವ ಮತ್ತೊಂದು ಡೆಫಿನಿಷನ್ ತುಪ್ಪ ಶಬ್ದದ್ದು. ಇದು ನಾ ಕಸ್ತೂರಿಯವರ ಅನರ್ಥಕೋಶದ್ದೋ ಬೀಚಿಯವರ ತಿಂಮಿಕ್ಷನರಿಯದ್ದೋ ನೆನಪಾಗುತ್ತಿಲ್ಲ . ತುಪ್ಪ - ಪಕ್ಕದಲ್ಲಿ ಊಟಕ್ಕೆ ಕೂತವನ ತಟ್ಟೆಗೆ ಚಮಚ ಬಡಿದಾಗ ಉಂಟಾಗುವ ಶಬ್ದ. ಈ ತುಪ್ಪದ ಡೆಫಿನಿಷನ್ ಬಹುಕಾಲ ನನ್ನ ಪರಮಪ್ರಿಯ ಜೋಕ್ ಆಗಿತ್ತು ಇದನ್ನು ಒಂದಷ್ಟು ಗೆಳೆಯರಿಗೆ ಹೇಳಿ ಅವರು ಅರ್ಥವಾಗದೆ ಕಣ್ಣು ಪಿಳಿ ಪಿಳಿ ಮಾಡಿದಾಗ ಪೆಚ್ಚಾದದ್ದೂ ಇದೆ!

ಬೀಚಿ ಒಂದಷ್ಟು ಕಾದಂಬರಿಗಳನ್ನೂ ಬರೆದಿದ್ದಾರೆ. ತಮ್ಮ ಆತ್ಮಕಥನವನ್ನು ‘ನನ್ನ ಭಯಾಗ್ರಫಿ’ ಅಂದಿದ್ದಾರೆ! ಯಾವ ಜೋಕ್ ಕೇಳಿದರೂ ಇದು ಬೀಚಿ ಜೋಕ್ ಅನ್ನಿಸುವಷ್ಟು ಹುಲುಸಾದ ಹಾಸ್ಯದ ಬೆಳೆ ತೆಗೆದಿದ್ದಾರೆ ಅನ್ನುವುದು ಅವರ ಹೆಗ್ಗಳಿಕೆ. ಇದನ್ನು ಅವರ ಜೋಕ್ ಗಳೊಂದಿಗೇ ಮುಗಿಸುತ್ತೇನೆ, ಅವರ ಯಾವ ಪುಸ್ತಕ ಸಿಕ್ಕರೂ ಚಪ್ಪರಿಸಿಕೊಂಡು ಓದಿ ಅನ್ನುವ ಸಲಹೆಯೊಂದಿಗೆ.
********************************************
ಬೀchiಯವರನ್ನು ಒಬ್ಬ ತೆಲುಗು ಸಾಹಿತಿ ಕೇಳಿದರಂತೆ: ನಾನು ನನ್ನ ಪುಸ್ತಕಗಳ ಸೆಟ್‍ ಕಳಿಸುತ್ತೇನೆ.ನೀವು ನಿಮ್ಮ ಪುಸ್ತಕಗಳ ಸೆಟ್‍ ನನಗೆ ಕಳಿಸಿ.
ಬೀchi : ಎರಡೂ ಕಡೆಯಿಂದ ಅದು ನನಗೇ ಲಾಸು
**********************************************
ಗುರುಗಳು ತಮ್ಮ ಶಿಷ್ಯ ತಿಮ್ಮನನ್ನು ಪ್ರಶ್ನಿಸಿದರು ನಮ್ಮ ದೇಶದ ಸಮಸ್ಯೆಗಳಿಗೆಲ್ಲಾ ಏನು ಕಾರಣ? "ನಮ್ಮ ರಾಜಕೀಯ ನೇತಾರರು", ಉತ್ತರಿಸಿದ ತಿಮ್ಮ. "ಸರಿ, ಈ ಸಮಸ್ಯೆಗೆ ಪರಿಹಾರವೇನಾದರು ಇದೆಯಾ?" ಕೇಳಿದರು ಗುರುಗಳು. "ಬಹಳ ಸರಳ ಉಪಾಯವಿದೆ ಗುರುಗಳೆ" ಹೇಳಿದ ತಿಮ್ಮ. ಆದೇನೆಂದು ಬೊಗಳು ಎಂದರು ಗುರುಗಳು."ಏನಿಲ್ಲಾ ಗುರುಗಳೆ, ನಮ್ಮ ನೇತಾರರೆನ್ನೆಲ್ಲಾ ಮೂರು ಬಾರಿ ನೀರಿನಲ್ಲಿ ಅದ್ದಿ ಎರಡು ಸಾರಿ ಮಾತ್ರ ಹೊರಗೆ ತೆಗೆಯಬೇಕು" ಥಟ್ಟನೆ ಹೇಳಿದ ತಿಂಮ್ಮ ಬ್ರಹ್ಮ.
*************************************************
ಬೆಳಗಿನ ಜಾವದಲ್ಲಿ ಎದ್ದು ತಿಂಮ ಕಾಲ್ನಡಿಗೆಯಲ್ಲಿ ಹೊರಟಿದ್ದ. ಊರ ಹೊರಗೆ ಕೊಂಚ ದೂರ ಸಾಗಿದ ಮೇಲೆ ಗ್ಯಾಸ್ ಪ್ಲಾಂಟಿನ ಬಸ್ಸೊಂದು ಹಿಂದೆ ಬಂದಿತು.
ಪರಿಚಿತ ಡ್ರೈವರನಿದ್ದಕಾರಣ ಮೋಟಾರು ನಿಲ್ಲಿಸಿ ತಿಂಮನನ್ನು ಮಾತಾಡಿಸಿದ.
"ಹಳ್ಳಿಯವರಿಗೂ ನಡೆಯೋದಾ? ಬಾರೋ ತಿಂಮ ಮೋಟರಿನಲ್ಲಿ, ಹಳ್ಳಿಯಲ್ಲಿ ನಿನ್ನನ್ನು ಇಳಿಸುತ್ತೇನೆ."
"ಇಲ್ಲ, ನೀವು ಹೋಗಿ. ನಾನು ನಡದೇ ಬರುತ್ತೇನೆ."
"ಏಕೋ? "
"ಇಂದು ನಾನು ಹಳ್ಳಿಗೆ ಹೋಗಲೇಬೇಕು. ಕೊಂಚ ಅವಸರವಿದೆ. "

Monday 18 April 2016

Imdb Top 250 made easy

I know that many are going to hate me for saying this. I might even receive death threats for doing this! It has to be said, I will say it. This post is about Maths!!
Okay, now the good news. This is a "Math does not suck" type of post and we are going to talk about movies, Imdb top 250 to be specific. For the uninitiated, Imdb is a database of every movie ever made(Almost). Anybody can review movies there and anybody can give a rating. 1 for the blood curdlingly bad films and 10 for the ones you would want to recommend to your girlfriend. Imdb top 250 is the list of 250 most popular movies as decided by the Imdb voters(Anybody can be a voter). We will take a peek at the scary formula first and then we will see how easily you can arrive at it if we use some common sense (Common sense is not so common, I know!).
Well, as Cracked magazine wrote once, Our brains are not meant to instinctively understand any equation more complex than this:
Bear = Run Away
So don't worry if the formula for Imdb top 250 looks like the lyrics of that Salman Khan song PO Kendi Po Po(or whatever).
Here is the formula:
weighted rating (WR) = (v ÷ (v+m)) × R + (m ÷ (v+m)) × C
Where:
R = average for the movie (mean) = (Rating)
v = number of votes for the movie = (votes)
m = minimum votes required to be listed in the Top 250 (currently 25,000)
C = the mean vote across the whole report
What on earth is this? Do mathematicians have to spoil movie lists also? Hang on while I unpack this formula. Let us try to build a rating system.
Can't we just take the simple average of all votes? Let us say I am sitting with my friend Ganesh and Mukesh Ambani. I earn 1 lakh Rs, Ganesh gets 50K and Ambani has 500 lakh Crores! What if we calculate the average income of this group? Our average would be 166 lakh crores or something. I don't even know how many zeroes are there in one lakh crore but the average income is this! This is the problem with averages. Extreme cases like Ambani will distort it.
There is another problem. Say you have to review a restaurant. Let us give a rating to a Hotel based on some factors. Seats = 8/10, Tables = 9/10. Suppliers = 9/10, Plates = 10/10 Food = 1/10. The hotel gets 37/50. If we just take the average, this hotel will get a rating of 7.4/10. What do you think is wrong with this rating system? Equal weightage (importance) is given to everything!! If everything else is good but the quality of food is terrible the hotel should not get a good rating, right? This is why in math we have the concept of weightage. Go back to the equation and note the word "Weighted".
Say, there is this guy Mr fan. Only film fan has seen in life is Shahrukh Khan's Crappy new year, this guy might think that crappy new year is the greatest piece of artistic achievement in the history of Universe. And we have Mr Roger Ebert who has seen 12000 movies in 33 different languages. Both have voted for this film. Whose opinion should count more? Whose votes should get more weightage?
Take another case. Here is that intellectual and angry critic who watched 100 films and hated 99 of them. 2/5 by him is considered to be very generous. Would you count on this guy's ratings? And there is this person who has watched 100 random films and he has given 4/5 to 98 of them. Either he is one of those power of positive thinking dudes or he is lying. Again, this person's ratings should not get much weightage. If you suddenly vote on a large number of films in the weekend that Dilwale came out, giving Dilwale the highest score, again we don't need a Sherlock Holmes to say what type of person you are!!
Imdb tries to give more weightage to neutral voters who have seen lots of films, it tries to punish the votes by extreme cases.
Here is another scenario. Let us say we have 2 films. One is called Kejriwal and one is called Modi. These films have received 1000 votes each. What if all these were Namo fans? They would all give 10/10 to Modi film and 0/10 to Kejriwal film. They wouldn't even bother to watch the films. What if these 1000 voters are the hyper liberals? They would give 0/10 to Modi with the fiery passion of a thousand blazing suns. System would not be fair to either Modi or Kejri. We need more neutral voices to smooth out this type of extreme hatred.
If you were a mathematician, how would you solve this? How to make the votes more neutral mathematically? Firstly, Imdb says that there should at least be 25000 votes. When we have 25000 votes we can assume that not all of them are going to be Namo fans or sickular libtards. Another way to solve the problem is to give some neutral votes by default, give it like a bonus. If we blindly give 20000 votes with 7/10 rating then these 1000 Namo haters cannot spoil the rating easily. They will need 20000 haters to bring down the 20000 neutral votes, that is difficult.
Now what if we have 5 lakh voters? That would be the real verdict. We won't need any neutral votes in this case. All 5 lakh are not going to be extremists. So basically when there are only 1000 votes we want the neutral votes to matter, when there are 5 lakh votes we don't want these neutral votes to count. This is exactly what the equation is doing. Here is the formula again. (v ÷ (v+m)) × R + (m ÷ (v+m)) × C. Let us dissect this formula. It looks like this:
Something x R + Something else x C.
C is the neutral vote which is blindly given by Imdb. R is the actual average vote given by voters.
Something = very high when v is a big number. Something else = very high when v is small. In other words, something = very high when v is big(There are 5 lakh voters). Something else = very high when v is small(only 1000 voters).
Put another way, it is actual votes x something + Neutral votes x something else. It is like a seesaw with Neutral votes on one side and actual votes on the other.
One mathematician called Thomas Bayes(Famous for Bayes’s theorem) came up with the idea of starting with neutral votes. Hence it is called as a Bayesian estimate. See! We arrived at this fancy formula just by using some common sense and 6th std level maths !! Isn't that cool?