ಇದೊಂದು ವಿಚಿತ್ರ ಕಲ್ಪನೆ, ಈಗಿನ ಹಾಲಿವುಡ್ ಸಿನೆಮಾಗಳ ಸಂಭಾಷಣೆಗಳನ್ನ ನಮ್ಮ
medieval ಕವಿಗಳು ಬರೆದರೆ ಹೇಗಿದ್ದೀತು ಅಂತ. ಸಿಕ್ಕಾಪಟ್ಟೆ ತಲೆ ಕೆಡಿಸೋ ಡೈಲಾಗ್ಗಳು ಇರೋ
Fight Club ಅನ್ನೇ ತಗೊಳ್ಳೋಣ, ಇದು Chuck Palahniuk ಬರೆದ ಕಾದಂಬರಿ ಆಧರಿಸಿದ ಚಿತ್ರ. ನಾನು ತುಂಬಾ ಇಷ್ಟ ಪಡುವ ನಿರ್ದೇಶಕ
David Fincher ಇದನ್ನ ನಿರ್ದೇಶಿಸಿದ್ದ.
"You
are not your job, you're not how much money you have in the bank. You are not
the car you drive. You're not the contents of your wallet. You are not your
fucking khakis. You are all singing, all dancing crap of the world" ― Chuck Palahniuk, Fight Club
ಇದನ್ನ ನಮ್ಮ ಕುಮಾರ ವ್ಯಾಸ ಬರೆದರೆ ಹೇಗಿರಬಹುದು ? ಹೀಗೆ :
ಕಾಯಕವು ನೀನಲ್ಲವೊ ಕೇಳು
ಮಾಯಕದ ಧನ ಕನಕ ನೀನಲ್ಲ
ರಾಯರೆಲ್ಲರನೊಯ್ವ ರಥವೇ ನೀನು ಧರಣಿಯಲಿ
ಕಾಯ ಒಪ್ಪುವ ಬಟ್ಟೆ ನಿನ್ನದೆ
ಆಯೆನುತ ಬೊಬ್ಬಿರಿದು ದುಗುಡದಲಿ
ಗಾಯನದಲಿ ಬಾಯ ಮೌನವ ಮುರಿವೆ ನೀನೆಂದ
(ಹೆಚ್ಚು ಕಮ್ಮಿ ಭಾಮಿನೀ ಷಟ್ಪದಿಯಲ್ಲೇ ಇದೆ, ಕಲಿಯುಗ ದ್ವಾಪರವಾಯಿತೋ ಇಲ್ಲವೋ ಗೊತ್ತಿಲ್ಲ , ಆದಿ ಪ್ರಾಸಗಳನ್ನ ತರುವಷ್ಟರಲ್ಲಿ ನನಗಂತೂ ಸಾಕಾಯಿತು)
"We
buy things we don't need, with money we don't have to impress people we don't
like" ― Chuck Palahniuk,
Fight Club
ಇದು ನಮ್ಮ ಬಸವಣ್ಣನವರ ವಚನ ಶೈಲಿಯಲ್ಲಿ:
ಉಳ್ಳವರು ಕೊಳ್ಳುವರು
ಇಲ್ಲಿ ಇಲ್ಲದ ಹೊನ್ನ ಕಳೆದು
ತಮಗೆ ಸಲ್ಲದ ಜನರ ಮೆಚ್ಚಿಸಲಿಕ್ಕೆ
ತನಗೊಲ್ಲದ ಕಡೆ ನಡೆಯೆಂಬರಯ್ಯಾ
ಇದ ಕೂಡಲ ಸಂಗಮ ದೇವಯ್ಯನೊಲ್ಲ ಕಾಣಿರಣ್ಣ
No comments:
Post a Comment