ಸಿಂಪಲ್ ಆಗೊಂದ್ ಲವ್ ಸ್ಟೋರಿ ಸಿನೆಮಾಕ್ಕೆ ನಾನು ಬರೆದಿದ್ದ ಹಳೇ ಪಾತ್ರೆ ಹಳೇ ಕಬ್ಣದಷ್ಟು ಹಳೇ ವಿಮರ್ಶೆ :
ನಿನ್ನೆ ಎಲ್ಲ ನಿನ್ನೆಗಳ ಥರ ಇರಲಿಲ್ಲ, ಬಹಳಷ್ಟು ನಾಳೆಗಳು ನೆನಪು ಇಟ್ಟುಕೊಳ್ಳುವಂತ ನಿನ್ನೆ ಮಾಲೆ ಪಟಾಕಿ ಒಂದು ಸಿಡಿಯಿತು. ಅದು ಮಾತಿನ ಪಟಾಕಿ, ತರಲೆಗಳ, ಈಗಿನ ಹುಡುಗರು ಮೆಚ್ಚಿ ಅಹುದಹುದೆನ್ನುವಂತ ಮಾತುಗಳ ಸರ ಪಟಾಕಿ.
ಭಯಂಕರ ಸ್ಟಾರ್ ಗಳು ಅಂತ ಯಾರೂ ಇಲ್ಲದಿದ್ದರೆ ಕನ್ನಡ ಸಿನಿಮಾ ನೋಡೋದಕ್ಕೆ ಯಾರೂ ಬರೋದಿಲ್ಲ ಅನ್ನೋ ನಂಬಿಕೆಯ ತಲೆ ಮೇಲೆ ಹೊಡೆದಂತೆ ಜನ ಬಂದಿದ್ದರು. ಮಲ್ಟಿಪ್ಲೆಕ್ಸುಗಳು ಸೀಟು ಖಾಲಿಯಾಗಿದೆ ಅನ್ನೋ ಬದಲು ಟಿಕೆಟ್ ಖಾಲಿಯಾಗಿದೆ ಅಂತ ಉಸುರಿ ಧನ್ಯವಾದವು. ಎಲ್ಲ ಥಿಯೇಟರ್ ಗಳ ಮುಂದೆಯೂ ಕಾಲೇಜು ಹುಡುಗರ ದಂಡು, ಥಿಯೇಟರ್ಗಳ ಹತ್ತಿರ ಜನ ಸಾಗರ. ಮಹಾಸಾಗರ. ಹಿಂದೂ ಮಹಾ ಸಾಗರ, ಮುಂದೂ ಮಹಾ ಸಾಗರ! ಆ ಮಟ್ಟಿಗೆ ಇದು ಒಂಥರಾ ಅತಳ, ಸುತಳ, ಭೂತಳ, ಪಾತಾಳ, ತಳಾತಳ ಮತ್ತು ಫೇಸ್ಬುಕ್ ಗಳಲ್ಲಿ ಅಡಗಿದ್ದ ಪಡ್ಡೆ ಗಳನ್ನ , ಕಾಲೇಜು ಗಳ ಹತ್ತಿರ ಸುಳಿದಾಡುತ್ತಿದ್ದ ಹುಡುಗರನ್ನ ಥಿಯೇಟರ್ಗೆ ಎಳೆದು ತಂದ ಹೊಸ ಅಲೆಯ ಸಿನಿಮಾ. ಈ ಥರ ಹುಡುಗರು ನೋಡೋ ಅಂತ ಸಿನಿಮಾ ಮಾಡಿಯೂ ಗೆಲ್ಲಬಹುದು ಅಂತ ಈ ಸಿನಿಮಾ ಸಾಧಿಸಿ ತೋರಿಸಲಿ ಅಂತ ಹಾರೈಸಿ ಈ ವಿಚಾರವನ್ನ ಇಲ್ಲಿಗೆ ಕೈ ಬಿಡಬಹುದು!!
ಚಿತ್ರ ಕಥೆ ಬರೆಯೋದನ್ನ ಹೇಳಿ ಕೊಡೋ ಮೇಷ್ಟ್ರುಗಳು ಹೇಳಿ ಕೊಡುವ ಮೊದಲನೇ ಪಾಠ ಅಂದರೆ “Don’t tell,Show” ಅಂತ. ಅಂದರೆ ಪಾತ್ರಗಳು ಆಡದೇ, ಮಾಡಿ ರೂಡಿಯೊಳಗುತ್ತಮರಾಗಬೇಕು ಅಂತ. ಲೋಕನಾಥ್ ಉಪ್ಪಿನ ಕಾಯಿ ತಿಂತೇನೆ ಅಂತ ಡೈಲಾಗ್ ಉದುರಿಸಬಾರದು, ತಿಂದು ತೋರಿಸಬೇಕು, ಯಾಕೆಂದರೆ ಇದು ದೃಶ್ಯ ಮಾಧ್ಯಮ. ಇಂಥಹ ಮೇಷ್ಟ್ರುಗಳ ಮಾತು ಕೇಳಿಸದಷ್ಟು ಮಾತಾಡಿದ್ದು ಯೋಗರಾಜ ಭಟ್ಟರ ಪಾತ್ರಗಳು. ಈಗ ಯೋಗರಾಜ ಭಟ್ಟರ ಪ್ರೀತಂ ಸ್ವಲ್ಪ ಸೈಲೆಂಟ್ ಹುಡುಗ ಅನ್ನಿಸುವಷ್ಟು ಮಾತಾಡಿರೋದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಪಾತ್ರಗಳು.
ಅಂದ ಹಾಗೆ ಸಿನಿಮಾ ಹೇಗಿದೆ? ಸೀರಿಯಸ್ಸಾಗಿ ಹೇಳುವುದಾದರೆ ತಮಾಷೆಯಾಗಿದೆ. ರೀಡರ್ಸ್ ಡೈಜೆಸ್ಟ್ ನ ಐವತ್ತು ಪ್ರತಿಗಳಿ ಗಾಗುವಷ್ಟು “Quotable quotes”ಅನ್ನ ಬರೆದು ಬಿಸಾಡಿದ್ದಾರೆ ನಿರ್ದೇಶಕ ಸುನಿ. ಕತೆ ಇಲ್ಲವಾ ಅಂತ ಕೇಳಿದರೆ ಇದೆ, ನಿಧಾನಕ್ಕೆ ಬಿಚ್ಚಿಕೊಳ್ಳುವ ಬಾವುಟದ ಥರ, ಮಾತುಗಳಲ್ಲಿ, ಹುಡುಗ ಹೇಳುವ ಕಥೆಯಲ್ಲಿ, ತರಳೆಯ ತರಲೆಯಲ್ಲಿ, ಕಥೆ ಬೇಕೇ ಬೇಕು ಅನ್ನುವವರಿಗೆ ಸಾಕಾಗುವಷ್ಟು ಕಥೆ ಸಿಗುತ್ತದೆ. ಒಬ್ಬ ಹುಡುಗ ಒಬ್ಬ ಹುಡುಗಿಯನ್ನ ನೋಡೋಕೆ ಹೋಗಿ, ಅವರು ಒಂದಿಷ್ಟು ಹರಟೆ ಹೊಡೀತಾ ತಮ್ಮ ಗತ ಸಾಹಸಗಳನ್ನ ಹೇಳಿಕೊಳ್ಳೋದೇ ಸ್ಟೋರಿ. ಹಾಗೆ ಹೇಳುವಾಗ ಎಷ್ಟು ಮಜವಾಗಿ ಹೇಳ್ತಾರೆ ಅನ್ನುವುದು ಸಿನಿಮಾ ಹಳೇ ಪಾತ್ರೆನಾ ಅಥವಾ ಹಳೇ ಪಾತ್ರೆ ಥರಾ ಕಾಣೋ ಹೊಸಾ ಕಬ್ಣನಾ ಅಂತ ಹೇಳುತ್ತೆ. ಹಿಟ್ಟು ನಿನ್ನೇದೇ ಆದರೂ ಇವತ್ತು ಹುಯ್ದಾಗ ದೋಸೆ ಗರಿ ಗರಿಯಾಗೇ ಇರೋದಿಲ್ವೆ? ಸುನಿ ಗರಿ ಗರಿಯಾಗಿ, ರುಚಿ ರುಚಿಯಾಗೇ ಹುಯ್ದಿದ್ದಾರೆ ದೋಸೇನ. ದಿನ ಪೂರ್ತಿ ತಂಟೆ ಮಾಡುತ್ತ ಕುಣಿದಾಡುವ ಮುದ್ದು ಹುಡುಗಿಯ ಲವಲವಿಕೆಯ ತರ ಇದೆ ಸಿನಿಮಾ. ಲವಲವಿಕೆ ಯಾರಿಗೆ ತಾನೇ ಬೇಡ ? ಸುಮ್ಮನೆ ಇಬ್ಬರು ಮಾತಾಡಿದರೆ ಕಥೆ ಆಗುತ್ತಾ? ಅದು ಅವರು ಏನು ಮಾತಾಡ್ತಾರೆ ಅನ್ನೋದರ ಮೇಲೆ ಅವಲಂಬಿಸಿರುತ್ತದೆ! Before Sunrise ಅನ್ನೋ ಇಂಗ್ಲಿಷ್ ಫಿಲ್ಮಿನಲ್ಲಿ ಎರಡು ಪಾತ್ರಗಳು ಮಾತಾಡೋದು ಬಿಟ್ಟು ಇನ್ನು ಏನೂ ಇರಲಿಲ್ಲ. The man from earthನಲ್ಲೂ ಮಾತೇ ಕತೆ!
ಕಣ್ಣಿಗೆ ಇಷ್ಟ ಆಗುವ ಜಾಗಗಳು, ಕಣ್ಣಿಗೂ ಕಿವಿಗೂ ಇಷ್ಟ ಆಗುವ ಹುಡುಗಿ, ಚಂದದ ಕ್ಯಾಮೆರಾ ಕುಸುರಿ ಎಲ್ಲ ಇದೆ. ಹೆಕ್ಕಿ ತೆಗೆದ ಲೊಕೇಷನ್ನುಗಳು, ಆ ಲೊಕೇಷನ್ನುಗಳಲ್ಲಿ ಓಡಾಡುವ ಹುಡುಗ ಹುಡುಗಿ, ಒಂದಷ್ಟು ಮಳೆ, ಸ್ವಲ್ಪ ಚಳಿ ಎಲ್ಲದರಲ್ಲೂ ನಿರ್ದೇಶಕ ಸಿಗುತ್ತಾನೆ. ರಕ್ಷಿತ್ ನೇರ,ದಿಟ್ಟ,ನಿರಂತರ. ಕನ್ನಡಕ್ಕೆ ಸ್ಕ್ರಿಪ್ಟು ಓದುವ, ಕಥೆ ಕೇಳುವ ಸೂಕ್ಷ್ಮ ಮನಸ್ಸಿನ ಅಭಯ್ ಡಿಯೋಲ್ ತರದ ಸ್ಟಾರ್ ಒಬ್ಬ ಇದ್ದರೆ ಚೆನ್ನಾಗಿತ್ತು ಅನ್ನುವವರು ರಕ್ಷಿತ್ ಕಡೆ ತಿರುಗಿ ನೋಡಬಹುದು. ರಕ್ಷಿತ್ ಹಾಗಾಗಲಿ. ಶ್ವೇತಾ ಅನ್ನೋ ಚಿನಕುರುಳಿ ಇನ್ನಷ್ಟು ಸಿನಿಮಾ ಮಾಡಲಿ. ಸುನಿ ಮತ್ತು ಅವರ ತಂಡ ಇನ್ನೊಂದಿಷ್ಟು ಚೆಂದದ ಸಿನಿಮಾ ಮಾಡಿ ನಮ್ಮನ್ನ ಖುಷಿ ಪಡಿಸಲಿ.
8.25/10

No comments:
Post a Comment