Friday, 15 January 2016

ಫ್ರೀ ಬೇಸಿಕ್ಸ್ ಬಗ್ಗೆ ಕೂಗೆದ್ದಿರುವುದು ಯಾಕೆ?

ಫ್ರೀ ಬೇಸಿಕ್ಸ್ ಬಗ್ಗೆ ಕೂಗೆದ್ದಿರುವುದು ಯಾಕೆ ಅಂತ ವಿವರಿಸಿ ನಾನು ಬರೆದಿದ್ದ ಪುಟ್ಟ ಬರಹ:

ಈಗ ನಮ್ಮ ಮುಖ್ಯ ಮಂತ್ರಿಗಳು ಪೇಪರ್ ಭಾಗ್ಯ ಅಂತ ಒಂದು ಯೋಜನೆ ಶುರು ಮಾಡಿದರು ಅಂತಿಟ್ಟುಕೊಳ್ಳಿ. ನಮ್ಮ ರಾಜ್ಯದಲ್ಲಿ ಎಷ್ಟೋ ಜನ ಬಡವರು ದುಡ್ಡಿಲ್ಲದೆ ಪತ್ರಿಕೆಗಳನ್ನು ಓದುತ್ತಿಲ್ಲ. ಹಾಗಾಗಿ ಒಂದೊಂದು ಹಳ್ಳಿಗೆ ನೂರು ಪೇಪರ್ ಉಚಿತವಾಗಿ ಹಂಚುವ ಯೋಚನೆ/ಯೋಜನೆ. ಚೆನ್ನಾಗಿದೆ, ಅಂದಿರಾ ? ಸ್ವಲ್ಪ ತಡೀರಿ ಸ್ವಾಮೀ !! ಪೂರ್ತಿ ವಿವರ ಕೇಳಿ :
ಪ್ರತೀ ಹಳ್ಳಿಗೆ ಹೋಗುವ ನೂರು ಪೇಪರ್ ಗಳೂ ಪ್ರಜಾವಾಣಿಯ ಪ್ರತಿಗಳೇ ಆಗಿರುತ್ತವೆ ಅಂದರೆ ಹೇಗಿರುತ್ತವೆ ?

ಯಾಕೆ ಸ್ವಾಮೀ ಜನ ಉದಯವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಹಾಯ್ ಬೆಂಗಳೂರು ಇವನ್ನೆಲ್ಲ ಓದಬಾರದೇ ಅನ್ನುವ ಪ್ರಶ್ನೆ ಬಂದೇ ಬರುತ್ತದೆ ? ಇದು ಪೇಪರ್ ಭಾಗ್ಯ ಅಲ್ಲ, ಪ್ರಜಾವಾಣಿ ಭಾಗ್ಯ ಅಂತ ಆಗುವುದಿಲ್ಲವೇ ? ಇದು ಹೇಗಾಯಿತು ಅಂದರೆ ಜನ ಮುಕ್ತವಾಗಿ ಟೀವಿ ನೋಡಬಹುದು, ಆದರೆ ನಾವು ತೋರಿಸುವುದು ಮುಕ್ತ ಮುಕ್ತ ಮಾತ್ರ ಅಂದ ಹಾಗೆ. ಕೊಡುವುದಾದರೆ ಎಲ್ಲ ಧಾರಾವಾಹಿಗಳನ್ನು ಕೊಡಿ, ಜನ ಬೇಕಾದ್ದು ನೋಡುತ್ತಾರೆ. ಪತ್ರಿಕೆ ಅಂದರೆ ಪ್ರಜಾವಾಣಿ, ಟೀವಿ ಎಂದರೆ ಮುಕ್ತ ಮುಕ್ತ ಅಂತ ಬಡವರನ್ನು ನಂಬಿಸಬೇಡಿ. ಇದು ಉಚಿತ ಅನ್ನುವ ಮೋಹದ ಜಾಲದಲ್ಲಿ ಜನರ ಆಯ್ಕೆ ಸ್ವಾತಂತ್ರ್ಯ ಕಸಿದುಕೊಳ್ಳುವ ಪ್ರಯತ್ನ ಅಂತ ಕೂಗೇಳುವುದಿಲ್ಲವೇ ?

ಫ್ರೀ ಬೇಸಿಕ್ಸ್ ಅಂದರೆ ಹೀಗೆಯೇ. ಬಡವರಿಗೆ ಉಚಿತವಾಗಿ ಇಂಟರ್ನೆಟ್ ಕೊಡುವ ಯೋಜನೆ, ಆದರೆ ನೆಟ್ಟಿನ ಹೆಸರು ಹೇಳಿ ಕೊಡುವುದು ಫೇಸ್ಬುಕ್ ಮತ್ತು ವಿಕಿಪೀಡಿಯಾ ಮಾತ್ರ (ಅಥವಾ ಫೇಸ್ಬುಕ್ ಇಗೆ ಬೇಕಾದ ಸೈಟುಗಳು ಮಾತ್ರ !!).

ಇನ್ನೊಂದು ದುಡ್ಡಿನ ವಿಚಾರ. ನಾಳೆ ಪ್ರಜಾವಾಣಿ ಉಚಿತ, ಉದಯವಾಣಿಗಾದರೆ ಐವತ್ತು ರೂಪಾಯಿ ಅಂತ ಮಾಡಿದರೆ ಉದಯವಾಣಿಯನ್ನು ಪರೋಕ್ಷವಾಗಿ ಸೋಲಿಸಿದ ಹಾಗೆಯೇ. ಇಂಟರ್ನೆಟ್ ಹೀಗೆ ಭೇದ ಭಾವ ಮಾಡುವುದಿಲ್ಲ. ಮುಕ್ತ ಮುಕ್ತ ಆದರೆ ಮಿಂಚಿನ ವೇಗದಲ್ಲಿ ತೋರಿಸಿ ಬೇರೆ ಧಾರಾವಾಹಿಯನ್ನು ನಿಧಾನವಾಗಿ youtube ತೋರಿಸಲಾರದು, ಅದಕ್ಕೆ ಎಲ್ಲರೂ ಒಂದೇ, ಇದನ್ನು ನೆಟ್ Neutrality ಅಂತಾರೆ. ಇಂಟರ್ನೆಟ್ ಇಗೆ ನನ್ನ ಬ್ಲಾಗ್ ಆದರೂ ಒಂದೇ ನಿಮ್ಮ ಬ್ಲಾಗ್ ಆದರೂ ಒಂದೇ. ನೀವು ದೊಡ್ಡವರು ಅಂತ ನಿಮ್ಮ ಬ್ಲಾಗ್ ಅನ್ನು ಬೇಗ ಲೋಡ್ ಆಗುವಂತೆ ನೆಟ್ ಮಾಡುವುದಿಲ್ಲ. ಇಲ್ಲಿ ಫೇಸ್ಬುಕ್ ಮತ್ತು ಅದರ ಗೆಳೆಯರ ಸೈಟ್ಗಳು ಬೇಗ ಲೋಡ್ ಆಗುವ ಹಾಗೆ ಮಾಡಿ, ಅವರ ಸ್ಪರ್ಧಿಗಳನ್ನು ಪರೋಕ್ಷವಾಗಿ ತುಳಿಯುವ ಹುನ್ನಾರ ಇದೆ ಅಂತ ಕೂಗೆದ್ದಿದೆ. ಇದು ನೆಟ್ Neutralityಗೆ ವಿರುಧ್ಧ ಅಂತ ಕಳಕಳಿ ಇದೆ

2 comments:

  1. There is a difference between Siddaramaiah giving free news papers and facebook's Free Basics(Let them call whatever they want). Siddaramaiah has to work within the limits of Constitution which means he don't have any liberty of favoring particular newspaper(business), that might amount to corruption. But Facebook don't have such constraints.
    In principle, I too want a neutral internet. But the question is how to achieve it.
    If particular corporation choose to do something like what free basics or airtel zero did, Isn't it their wish as long as they are doing out of their own money?. I don't expect govt to meddle in such things for the simple reason that tomorrow government can also interfere in other businesses just because vocal majority has asked to do so. This might boomerang to all those startups who asked government to ban particular business expression(Free basics) in their businesses too(like trader union can ask government to impose their condition on flipkart, amazon, same thing with ola, uber or all other platform businesses). Is that desired? I don't expect so and so does the same startup lobby which asked for Net-neutrality(fig leaf).
    Other fact is, who will be interested in investing in telecom sector when they know that govt can interfere in their business any time? what about telecom startups? When new developments seize to take place(new entrants hesitant to enter the market) and at the same time there is growing demand for more data network, existing ones(telcos) will start squeezing the consumer only, telcos will change business strategy to minimize the loss. So, effectively burden get transferred to the end-users.
    Today, It is not feasible financially to to have telecom network(data) to large parts of this country. And now government is blocking efforts like free-basics. So effectively it denied even the frugal internet that people could have used.
    One of the way it could have achieved Net-Neutrality is removing few regulations(which are redundant) which block new entrants. So that more players could have entered market and competitively ensured neutral internet.
    But what TRAI did effectively is only few existing will remain and continue to squeeze the customer. There won't be competitive market.

    ReplyDelete
    Replies
    1. True. That was a well thought reply. "Isn't something better than nothing" argument can also be used to support Free basics. The point about net neutrality is that what if an ISP(Internet service provider) like Reliance joins hands with Facebook? What if I start something called sharathbook? If Reliance makes accessing Facebook faster/easier and makes access to sharathbook difficult that would be against net neutrality. They would then be removing the level playing field.

      Delete