ಈಚೆಗೆ ಕಿವೀ ಪಕ್ಷಿಯನ್ನು ನೋಡಲು ಹೋಗಿದ್ದಾಗ ಅಲ್ಲೊಬ್ಬರು, "ಈ ಕಿವೀಗಳು territorial, ಅವಕ್ಕೆ ತಮ್ಮ ಜಾಗಕ್ಕೆ ಬೇರೆ ಪ್ರಾಣಿಪಕ್ಷಿಗಳು ಬಂದರೆ ಸಿಟ್ಟು ಬರುತ್ತದೆ" ಅಂದರು. ನನಗೆ ನಾನು ಕಳೆದ ವರ್ಷ ಏಪ್ರಿಲ್ 31ಕ್ಕೆ ಬರೆದಿದ್ದ,"ದರ್ಶನ್ ಸಿನೆಮಾಗಳಲ್ಲಿ ವಸಾಹತ್ತೋತ್ತರ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ" ಅನ್ನುವ ವಿಮರ್ಶಾತ್ಮಕ ಪ್ರಬಂಧ ನೆನಪಾಯಿತು. ಅದರ ಕೆಲವು ಸಾಲುಗಳು ನಿಮ್ಮ ಖುಷಿಗಾಗಿ:
ಚಿತ್ರವೊಂದರಲ್ಲಿ ದರ್ಶನ್ ಹೀಗೆ ಹೇಳುತ್ತಾರೆ :
ಏರಿಯಾ ಬೌಂಡರಿ ಹಾಕೊಂಡ್ ಹಾರೋಡೋದು, ಎಗರಾಡೋದು ಕಂತ್ರಿ, ಕಜ್ಜಿ ನಾಯಿಗಳು, ಎಲ್ಲೇ ಹೋದ್ರೂ ಅದೇ ಖದರ್ maintain ಮಾಡೋದು ಸಿಂಹ.
ಏರಿಯಾ ಬೌಂಡರಿ ಹಾಕೊಂಡ್ ಹಾರೋಡೋದು, ಎಗರಾಡೋದು ಕಂತ್ರಿ, ಕಜ್ಜಿ ನಾಯಿಗಳು, ಎಲ್ಲೇ ಹೋದ್ರೂ ಅದೇ ಖದರ್ maintain ಮಾಡೋದು ಸಿಂಹ.
ವಿಜ್ಞಾನಿಗಳು ನಮ್ಮನ್ನು ನಂಬಿಸುತ್ತಾ ಬಂದಿರುವುದು ಹೀಗೆ : lions have a strong sense of border and territory. Male lions defend their territory, by urinating to mark the area, roaring to promote fear and literally chasing off any intruders.
Their main competition is spotted hyenas that often go for the same prey as lions. These animals will fight and steal each other's food. This warfare goes beyond food; it is also the problem of territorial boundaries being crossed.
ಕಟುವಾಸ್ತವ ಹೀಗಿದ್ದರೂ, ನಮ್ಮ ಸಿಂಹಗಳು ಸಂಪ್ರದಾಯದ ಬೇಲಿ ಹಾರಿ ಖದರ್ maintain ಮಾಡಲಿ ಎಂಬ ಉದಾರವಾದ ದರ್ಶನರದ್ದು. ಇಂತಹಾ ದಿಟ್ಟ ನಿಲುವುಗಳಿಂದ ದರ್ಶನ್ ಇವತ್ತು ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ.
No comments:
Post a Comment