ಮಂಗಳವಾರ ಮಧ್ಯಾಹ್ನದ ತಲೆಹರಟೆ ಚಿಂತನೆ:
Connie Willis ಎಂಬವರು ಬರೆದಿರುವ ಸಣ್ಣಕಥೆಯೊಂದರ ಶೀರ್ಷಿಕೆ ಇದು:"The Soul Selects Her Own Society: Invasion and Repulsion: A Chronological Reinterpretation of Two of Emily Dickinson's Poems: A Wellsian Perspective". ಈ ಕಥೆಯ ಅಭಿಮಾನಿಗಳು ಯಾರಾದರೂ ಇದ್ದರೆ ಅವರ ಗತಿಯೇನು? ನಿಮ್ಮ ಫೇವರಿಟ್ ಕಥೆ ಯಾವುದು ಅಂತ ಯಾರಾದರೂ ಕೇಳಿದರೆ ಅವರು ಪಾಪ, "ಒಂದಿದೆ, ಹೆಸರು ನೋಡಿ ಹೇಳ್ತೇನೆ" ಎನ್ನಬೇಕಾದೀತೇನೋ !
ಇದಾದರೂ ಆದೀತು, Shirley Jackson ಎಂಬಾಕೆ ಬರೆದಿರುವ ಕವನವೊಂದರ ಶೀರ್ಷಿಕೆಯನ್ನು ನೋಡಿ: "Song for all editors, writers, theorists, political economists, idealists, communists, liberals, reactionaries, bruce bliven, marxist critics, reasoners, and postulators, any and all splinter groups, my father, religious fanatics, political fanatics, men on the street, fascists, ernest hemingway, all army members and advocates of military training, not excepting those too old to fight, the r.o.t.c. and the boy scouts, walter winchell, the terror organizations, vigilantes, all senate committees and my husband." ಈ ಕವನದ ಪೂರ್ಣಪಾಠ ಇಷ್ಟೇ:
I would not drop dead from the lack of you—
My cat has more brains than the pack of you
ನನ್ನ ಹೆಸರೆತ್ತಿದರೆ ಜನ ಹೆದರುತ್ತಾರೆ ಅಂತ ಈ ಕವಿತೆಗೆ ಹೇಳಿಕೊಂಡು ಓಡಾಡಲಿಕ್ಕೆ ಅಡ್ಡಿಯಿಲ್ಲ. ಏನಂತೀರಿ ?
No comments:
Post a Comment