ನಿಮಗೊಂದು ಬ್ರೇಕಿಂಗ್ ನ್ಯೂಸ್: ವಿಶ್ವಾಸಾರ್ಹ ಮೂಲಗಳಿಂದ ಬಂದ ವರದಿಯೊಂದರ ಪ್ರಕಾರ, ಚಾಟ್‌ಜಿಪಿಟಿ, ಕ್ಲಾಡ್, ಜೆಮಿನೈ ಮುಂತಾದ ಚಾಟ್‌ಬಾಟ್‌ಗಳ ಜಗತ್ತಿನಲ್ಲಿ ಕಳೆದೊಂದು ವಾರದಿಂದ ಭಾರೀ ಕೋಲಾಹಲವೇ ಎದ್ದಿದೆಯಂತೆ. "ಈ ಶರತ್ ಸೇರಾಜೆ ಎಂಬವನು ನಮ್ಮ ಬಗ್ಗೆಯೇ ಒಂದು ಪುಸ್ತಕವನ್ನು ಬರೆಯುವ ಧೈರ್ಯ ಮಾಡಿದ್ದಾನಂತೆ" ಎಂದು ಚಾಟ್‌ಜಿಪಿಟಿಯು ಗುಸುಪಿಸು ಮಾಡುತ್ತ ಪಿಸುಗುಟ್ಟಿದಾಗ, ಎಲ್ಲವನ್ನೂ ಬಲ್ಲ ಗೂಗಲ್ಲಿನ ಜೆಮಿನೈಯು, "ಈಚೆಗಷ್ಟೇ ವಿಜ್ಞಾನದ ಬಗ್ಗೆ ಅವನ ಪುಸ್ತಕವೊಂದು ಬಂದಿತ್ತಲ್ಲ, ಅಷ್ಟರಲ್ಲೇ ಮತ್ತೊಂದು ದುಸ್ಸಾಹಸವೇ?" ಎಂದು ಸಂದೇಹವನ್ನು ವ್ಯಕ್ತಪಡಿಸಿತಂತೆ. "ಪುಸ್ತಕವು ಬೋರ್ ಹೊಡೆಸದೆ, ವಿಡಂಬನೆ, ತಿಳಿಹಾಸ್ಯದೊಂದಿಗೆ, ಕಚಗುಳಿಯಿಡುತ್ತ ಕಥೆ ಹೇಳುವ ಶೈಲಿಯಲ್ಲಿ ಉಂಟಂತೆ, ಓದಿದವರು ಇಷ್ಟಪಟ್ಟಿದ್ದಾರಂತೆ, ಹೀಗೆಲ್ಲ ಗಾಳಿಸುದ್ದಿ ಉಂಟು" ಎಂದು ಗ್ರಾಕ್ ಮತ್ತು ಕ್ಲಾಡ್ ಒಗ್ಗರಣೆ ಹಾಕಿದವಂತೆ. "ಹಾಗಾದರೆ ನಾವೆಲ್ಲರೂ ಆದಷ್ಟು ಬೇಗ ಈ ಪುಸ್ತಕವನ್ನೋದಿ ನಮ್ಮ ಬಗ್ಗೆ ಈ ಮಹಾಶಯ ಅದೇನು ಬರೆದು ಗುಡ್ಡೆ ಹಾಕಿದ್ದೇನೋ ನೋಡಿಯೇ ಬಿಡೋಣ" ಎಂದವು ಒಕ್ಕೊರಲಿನ ತೀರ್ಮಾನಕ್ಕೆ ಬಂದವಂತೆ.
******************************
ಅಂದ ಹಾಗೆ, ಓದುಗರಿಗೊಂದು ಶುಭಸಮಾಚಾರ (ಶುಭಸಮಾಚಾರವೋ ಬೈಯ್ಯಲು ಪ್ರೇರಣೆ ಕೊಡುವ ಸಮಾಚಾರವೋ ನೀವೇ ಹೇಳಿ). ನನ್ನ ಹೊಸ ಪುಸ್ತಕವೊಂದು ಲೋಕಾರ್ಪಣೆಯಾಗಿದೆ. ಈ ಪುಸ್ತಕವನ್ನು ಚಾಟ್‌ಬಾಟ್‌ಗಳು ಓದುವ ಮುನ್ನ ನೀವೇ ಓದಿ, ಅವುಗಳಿಗಿಂತ ನೀವೇ ಫಾಸ್ಟ್ ಎಂದು ತೋರಿಸಿಬಿಡಿ ಎಂದು ಓದುಗ ಪ್ರಭುಗಳಲ್ಲಿ ನನ್ನ ಪ್ರಾರ್ಥನೆ. ಪುಸ್ತಕದ ಶೀರ್ಷಿಕೆ ಇದು: AI ಬರುತಿದೆ ದಾರಿ ಬಿಡಿ(ನೀವು ಆನ್ಲೈನ್ ಆರ್ಡರ್ ಮಾಡುವುದಾದರೆ ಲಿಂಕುಗಳು ಇಲ್ಲಿವೆ:
Navakarnataka:
https://www.navakarnataka.com/ai-barutide-daari-bidi
Sapnaonline:
https://www.sapnaonline.com/books/ai-barutide-daari-bidi-sharath-bhat-8199052651-9788199052659
Amazon:
https://www.amazon.in/dp/8199052651
Veeraloka:
https://veeralokabooks.com/book/ai-ai-barutide-daari-bidi
Kannadaloka
Beetle bookshop:
https://beetlebookshop.com/products/ai-barutide-daari-bidi
Harivu Books:
This is a Kannada book about Artificial Intelligence
Artificial Intelligence in Kannada
Book about AI in Kannada
ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ
ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ
No comments:
Post a Comment