Sunday 6 January 2019

ಹುಟ್ಟುತ್ತಲೇ ಜೀನಿಯಸ್ಸುಗಳು

ಜೀನಿಯಸ್ಸುಗಳು ಹೇಗೆ ರೂಪುಗೊಳ್ಳುತ್ತಾರೆ? "ಅಸಾಧಾರಣ ಪ್ರತಿಭೆ" ಎಂಬ ಪುಟಿಯುವ ಕಾರಂಜಿಯ ಮೂಲ ಸೆಲೆ ಎಲ್ಲಿರುತ್ತದೆ ಎನ್ನುವ ಪ್ರಶ್ನೆ ಎಲ್ಲೆಲ್ಲೋ ಕರೆದುಕೊಂಡು ಹೋದೀತು. ಸ್ವಲ್ಪ ಉತ್ಸಾಹ ಕೆರಳಿ, ಮೂಡು ಬಂದಿದ್ದರೆ, ರಿಸರ್ಚು ಮಾಡುವುದಕ್ಕೆ ಪುರುಸೊತ್ತು ಸಿಕ್ಕಿದ್ದರೆ ನಾನಿದರ ಬಗೆಗೆ ಒಂದಿಡೀ ಲೇಖನವೇ ಬರೆಯೋಣ ಅಂತಿದ್ದೆ, ಅದಾಗಲಿಲ್ಲ. ಜೊತೆಗೆ ಸೋಮಾರಿತನವೂ ಕಾಲು ಕೊಟ್ಟು ನನ್ನನ್ನು ಎಡವಿಸಿ ಸದ್ಯಕ್ಕೆ ಒಂದಷ್ಟು ಪುಡಿ ಮತ್ತು ಬಿಡಿ ವಿವರಗಳು ಮಾತ್ರ ಕೊಡುವ ಹಾಗೆ ಮಾಡಿದೆ.

ಮಕ್ಕಳು ಅಪ್ಪ ಅಮ್ಮನನ್ನೋ, ಅಜ್ಜ ಅಜ್ಜಿ,ದೊಡ್ಡಪ್ಪ, ಮಾವಂದಿರನ್ನೋ ಕೆಲವು ವಿಷಯಗಳಲ್ಲಿ ಹೋಲುತ್ತಾರಷ್ಟೇ. ಆದರೆ ಪ್ರತಿಭೆ, ಜೀನಿಯಸ್ಸು ರಕ್ತದಲ್ಲಿ, ವಂಶವಾಹಿಯಲ್ಲಿ ಬರುವುದು ಕಡಮೆ ಅಂತಲೇ ಹೇಳಬೇಕು. ಈ ಕೌಶಲ, ಪ್ರತಿಭೆ, ನೈಪುಣ್ಯ ಇವೆಲ್ಲ ಹುಟ್ಟಿನಿಂದಲೇ ಬರುತ್ತದೋ, ಕಲಿತು ಬರುತ್ತದೋ? ಜೀನಿಯಸ್ಸುಗಳು ಜೀನಿಯಸ್ಗಳಾಗಿಯೇ ಹುಟ್ಟುತ್ತಾರೋ ಅಥವಾ ಸ್ವಪ್ರಯತ್ನದಿಂದ ಪ್ರತಿಭೆಯನ್ನು ಹುಟ್ಟಿಸಿಕೊಳ್ಳುತ್ತಾರೋ ? ಈ nature Vs nurture ಎಂಬುದರ ಕುರಿತು ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಬಂದಿದ್ದರೂ, ಇದು ಕೋರ್ಟಿನಲ್ಲಿ ಇಪ್ಪತ್ತು ವರ್ಷ ಎಳೆಯಲ್ಪಟ್ಟ ಕೇಸಿನ ಹಾಗೆ ಆಗಿ, ಇನ್ನೂ ತೀರ್ಮಾನವಾಗದೆ ಉಳಿದಿದೆ.

ಒಂದು ವಿಷಯದಲ್ಲಿ 10000 ಘಂಟೆಗಳಷ್ಟು ಕಾಲ ತೊಡಗಿಸಿಕೊಂಡರೆ ಯಾರು ಬೇಕಾದರೂ ಅದರಲ್ಲಿ ಜೀನಿಯಸ್ ಆಗಿಬಿಡಬಹುದು ಅಂತ ಒಂದು ಪಕ್ಷದವರ ವಾದ. ಇಲ್ಲ, ಜೀನಿಯಸ್ ಗಳು ಹುಟ್ಟುವಾಗಲೇ ಬೇರೆಯವರಿಗಿಂತ ಭಿನ್ನವಾಗಿರುತ್ತಾರೆ, ಎಲ್ಲರದ್ದೂ ಒಂದು ಅಚ್ಚಾದರೆ ಮಹಾಪ್ರತಿಭೆಗಳು ಬೇರೆಯೇ ಅಚ್ಚಿನಲ್ಲಿ ಹೊಯ್ದ ಎರಕಗಳು ಅಂತ ವಿರೋಧಪಕ್ಷದವರ ಅಭಿಮತ. ಆಸಕ್ತರು 10000 ತಾಸು ಸಂಗೀತ ಸಂಯೋಜಿಸಿ ರೆಹ್ಮಾನೋ, 10000 ಗಂಟೆ ವಿಜ್ಞಾನಕ್ಕೆ ಕೊಟ್ಟು ನ್ಯೂಟನ್ನೋ, Claude Shannon ಆಗ್ತೀರಾ ನೋಡಿ, ಆದರೆ ನನಗೆ ಥ್ಯಾಂಕ್ಸ್ ಹೇಳಿ !

ಕುವೆಂಪು - ತೇಜಸ್ವಿ, ಡಿವಿಜಿ - ಸ್ವಾಮಿ, ಗೌರೀಶ - ಜಯಂತ್ ಕಾಯ್ಕಿಣಿ, ಎಸ್ ಡಿ ಬರ್ಮನ್ - ಆರ್ಡಿ ಬರ್ಮನ್, ಐದು ನೊಬೆಲ್ ಗೆದ್ದ Marie Curieಯ ಕುಟುಂಬ ಹೀಗೆ ಕೆಲವೇ ಕೆಲವು ಪ್ರಕರಣಗಳು ಬಿಟ್ಟರೆ ತೊಂಬತ್ತು ಪೆರ್ಸೆಂಟಿನಷ್ಟು ದೈತ್ಯ ಪ್ರತಿಭೆಗಳ ಮಕ್ಕಳು ಅಪ್ಪ ಅಮ್ಮನಂತಾಗದೆ ಸಾಧಾರಣ ಮನುಷ್ಯರೇ ಆಗಿದ್ದದ್ದು ಕಂಡು ಬರುತ್ತದೆ. ಕವಿ ಜನ್ನನ ತಂಗಿಯ ಗಂಡ ಮಲ್ಲಿಕಾರ್ಜುನ (ಸೂಕ್ತಿ ಸುಧಾರ್ಣವದ ಸಂಪಾದಕ), ಅವನ ಮಗ ಶಬ್ದಮಣಿದರ್ಪಣ ಬರೆದ ಕೇಶಿರಾಜ. ತರಾಸು ಅವರ ದೊಡ್ಡಪ್ಪ ಟಿ ಎಸ್ ವೆಂಕಣ್ಣಯ್ಯ, ತಸು ಶಾಮರಾಯರು ಅವರ ತಮ್ಮ. ಇಂತವೂ ಕುತೂಹಲ ಹುಟ್ಟಿಸುವ ಕೇಸ್ ಗಳೇ. ಆದರೆ ಕುಮಾರವ್ಯಾಸನ ಮಕ್ಕಳು ಅವನಂತಾದರೇ ? ವಿಶ್ವೇಶ್ವರಯ್ಯನವರ ಮಕ್ಕಳು ಅವರ ಮಟ್ಟಕ್ಕೆ ಏರಿದರೇ ? ಕಾಳಿದಾಸನ ಮಕ್ಕಳೋ,ಪಾಣಿನಿಯ ಮಕ್ಕಳೋ,ಡಾವಿಂಚಿಯ ಮಕ್ಕಳೋ ಯಾರೆಂತಲೇ ಗೊತ್ತಿಲ್ಲ.
ಹೀಗಿರುವಾಗ ನಮ್ಮ ತಲೆಗೆ ಹುಳ ಬಿಡಬಲ್ಲಂತಹಾ ಕುಟುಂಬ ಒಂದಿದೆ, ಅದು Bernoulli's theorem ಕೊಟ್ಟ ಬರ್ನೌಲಿಯ ಕುಟುಂಬ. ಆ ಅಸಾಧಾರಣ ವಂಶದ ಬಗ್ಗೆ Men of mathematics ಅನ್ನುವ ಪುಸ್ತಕದಲ್ಲಿ ET Bell ಹೀಗೆ ಬರೆದಿದ್ದಾನೆ :

Which in 3 generations produced 8 mathematicians, several of them outstanding, who in turn produced a swarm of descendants about half of whom were gifted above average and nearly all of whom, down to the present day, have been superior human beings. 120 of the descendants of the family have been traced and of this considerable posterity the majority have achieved distinction -- sometimes amounting to eminence -- in the law,scholarship,science,literature, the learned professions, administration, and the arts. None were failures. Most significant thin about the mathematical members of this family is that they did not deliberately choose mathematics as a profession but drifted into it in spite of themselves as a dipsomaniac returns to alcohol ! ಈ ವಂಶದವರ ಜೀನ್ ಗಳು ವಿಜ್ಞಾನಿಗಳಿಗೆ ಸಿಕ್ಕಿಬಿಟ್ಟಿದ್ದರೆ ಏನಾದರೊಂದು ಹೇಳಿಬಿಡಬಹುದಿತ್ತು ! 

No comments:

Post a Comment