Monday 7 January 2019

ಸ್ವಾಮಿ ಜಗದಾತ್ಮಾನಂದ ಇನ್ನಿಲ್ಲ

ನಾನು ಓದಿದ ಮೊತ್ತಮೊದಲ ಸೆಲ್ಫ್ ಹೆಲ್ಪ್ ಪುಸ್ತಕ ಅಂದರೆ ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಅಥವಾ Dale Carnegieಯ ಯಾವುದಾದರೊಂದು ಪುಸ್ತಕ ಇರಬೇಕು. ಡೇಲ್ ಕಾರ್ನೆಗಿಯನ್ನು ಓದು ಅಂತ ಅಪ್ಪ ಹೇಳಿದ್ದರಿಂದ How to Win Friends & Influence People, How to Stop Worrying and Start Living ಮತ್ತು How to Develop Self-Confidence and Influence People by Public Speakingಗಳನ್ನು ಓದಿ ಮೆಚ್ಚಿದ್ದೆ. ಆಮೇಲೆ Norman Vincent Peale ಸಂಪಾದಿಸಿದ The Power of Positive Thinking ಕೈಗೆ ಬಂದಿತ್ತು , Robert Schuller ಅವರ Tough Times Never Last, but Tough People Do! ಆಕರ್ಷಕ ಶೀರ್ಷಿಕೆಯಿಂದ ಮನಸೆಳೆದಿತ್ತು. ಅದಾದ ಮೇಲೆ ಯಂಡಮೂರಿಯ ವಿಚಾರಗಳಲ್ಲಿ ಹೊಸತನವಿದೆ ಅನ್ನಿಸಿತ್ತು, ರವಿ ಬೆಳಗೆರೆಯ ಬಾಟಮ್ ಐಟಂ ವಿಶಿಷ್ಟ ನಿರೂಪಣೆಯಿಂದ, ಪಕ್ಕಾ ಪ್ರಾಕ್ಟಿಕಲ್ ಆದ, ನಿತ್ಯಜೀವನಕ್ಕೆ ಹತ್ತಿರದ ದೃಷ್ಟಿಕೋಣದಿಂದ ಓದಿಸಿಕೊಂಡು ಹೋಗಿತ್ತು.

ಮುಂದಿನ ಹಂತದಲ್ಲಿ ಹಿಂದೆ ಓದಿದ್ದನ್ನು ಪ್ರಶ್ನಿಸುವ The Antidote: Happiness for People Who Can't Stand Positive Thinking ಅನ್ನು ಓದಿದ್ದೆ. Bright-sided: How Positive Thinking Is Undermining America ಅನ್ನು ಓದಿದೆನೋ ಇಲ್ಲವೋ ನೆನೆಪಾಗುತ್ತಿಲ್ಲ. Rich Dad, Poor Dad ಅಷ್ಟೇನೂ ಹಿಡಿಸಿರಲಿಲ್ಲ. ವಿಜ್ಞಾನ, ಸಂಶೋಧನೆ ಮುಂತಾದವನ್ನೆಲ್ಲ ಇಟ್ಟುಕೊಂಡು ಬರೆದ ರಿಚರ್ಡ್ ವೈಸ್ಮ್ಯಾನ್ ಅವರ :59 Seconds: think a little change a lot ಇಷ್ಟವಾಗಿತ್ತು. Influence: The Psychology of Persuasion by Robert Cialdini ಚೆನ್ನಾಗಿತ್ತು, Randy Pausch ಮರಣಶಯ್ಯೆಯಲ್ಲಿದ್ದುಕೊಂಡು ಕೊಟ್ಟ The Last Lecture ಎಂಬ ಬಿಸಿದೋಸೆಯನ್ನು ಚಪ್ಪರಿಸಿದ್ದೆ, Thinking, Fast and Slow By Daniel Kahneman ಒಂದು ಕಣ್ಣುತೆರೆಸುವ ಪುಸ್ತಕ ಅನಿಸಿತ್ತು,Outliers The Story of Success by Malcolm Gladwell ಅನ್ನು ಹೇಗೂ ಓದಿದ್ದಾಗಿತ್ತು. Stumbling on Happiness ಅಂತೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಅಂತ ಹಿಂದೆಯೇ ಬರೆದಿದ್ದೆ.

ಇದೆಲ್ಲ ಏನೇ ಇದ್ದರೂ ಜಗದಾತ್ಮಾನಂದರ "ಬದುಕಲು ಕಲಿಯಿರಿ"ಗೆ ನಾಸ್ಟಾಲ್ಜಿಯಾದ ಕಾರಣದಿಂದಾದರೂ ಅಗ್ರಪೂಜೆಯನ್ನು ಮನಸ್ಸು ಸಲ್ಲಿಸುತ್ತಿದೆ, ಓದಿ ರುಚಿಸಿ, ಹಲವರ ಹತ್ತಿರ "ಇದನ್ನೋದಿ" ಅಂತ ಹೇಳಿದ ಪುಸ್ತಕಗಳಲ್ಲಿ ಅದೂ ಒಂದು.

ಉಳಿದದ್ದು ಸೂರ್ಯಪ್ರಕಾಶ ಪಂಡಿತರ ವಾಲಿನಿಂದ :
ಬದುಕನ್ನು ಕಲಿಸಿದ ಸ್ವಾಮೀಜಿ
==============================
'ಬದುಕಲು ಕಲಿಯಿರಿ' ಸಾವಿರಾರು ಜನರ‌ ಬದುಕಿಗೆ ಊರುಗೋಲಾದದ್ದು ಮಾತ್ರವಲ್ಲ, ಅದು ಕನ್ನಡದಲ್ಲಿ ‌ವ್ಯಕ್ತಿತ್ವನಿರ್ಮಾಣವಿಷಯವನ್ನು ಕುರಿತು ಪುಸ್ತಕರಚನೆಗೂ‌ ಪ್ರಕಾಶನಕ್ಕೂ ನಾಂದಿ ಹಾಡಿತೆನ್ನಬಹುದು. ಹಲವರ ಪಾಲಿಗೆ ಅದು ಉಪನಯನ, ಹುಟ್ಟುಹಬ್ಬದಂಥ ಸಂದರ್ಭಗಳಿಗೆ ಒದಗುವ ಸಾರ್ಥಕ ಗಿಫ್ಟ್. ಜೀವನೋತ್ಸಾಹಕ್ಕೆ ಸ್ವತಃ ಸ್ವಾಮಿಜಿಯವರೇ ಮೂರ್ತರೂಪವಾಗಿದ್ದರು. ಅನಾರೋಗ್ಯದಲ್ಲೂ ಅವರು ಕುಗ್ಗಿ ಮಾತನಾಡುತ್ತಿರಲಿಲ್ಲ. ಸುಮಾರು 7-8 ವರ್ಷಗಳ ಹಿಂದೆ ಅವರನ್ನು ದೂರದರ್ಶನಕ್ಕಾಗಿ ಸಂದರ್ಶನ ಮಾಡುವ ಅವಕಾಶ ಒದಗಿತ್ತು. ಅವರನ್ನು ಕಂಡೊಡನೆ 'ಹೇಗಿದ್ದೀರಿ ಸ್ವಾಮೀಜಿ?' ಎಂದೆ. 'ಎಂಬತ್ತು ವರ್ಷದಲ್ಲಿ ಇರಬಹುದಾದ ಸ್ಥಿತಿಗಿಂತಲೂ ಚೆನ್ನಾಗಿರುವೆ!' ಎಂದರು. ರಂಗನಾಥ ಶರ್ಮಾಜಿ ಅವರ ಬಗ್ಗೆ ವಿಚಾರಿಸಿದರು; ಶರ್ಮಾಜಿ ಅವರಿಂದ ರಘುವಂಶ ಮುಂತಾದ ಸಂಸ್ಕೃತಪಾಠಗಳನ್ನು ಮಾಡಿಸಿಕೊಂಡದ್ದನ್ನು ನೆನಪಿಸಿಕೊಂಡರು....
ಪೂಜ್ಯ ಸ್ವಾಮಿ ಜಗದಾತ್ಮಾನಂದಜೀ ಅವರಿಗೆ ಪ್ರಣಾಮಗಳು...

=============================

1 comment:

  1. ನಾನು ಈವರೆಗೆ ೫೧ ಕಥೆಗಳನ್ನು ಬರೆದಿದ್ದೇನೆ.ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ೧೯೬೬ ರಲ್ಲಿ ನನ್ನ 'ಎಡಹೊಳೆಯ ಹನುಮ' ಕಥೆಗೆ ೨ ನೇ ಬಹುಮಾನ, ೧೯೯೫ ರ ಕರ್ಮವೀರ ದೀಪಾವಳಿ ಕಥಾಸ್ಪರ್ಧೆಯಲ್ಲಿ 'ಶಾಶನಬಂಎಯ ಸುತ್ತಮುತ್ತ ' ಕಥೆಗೆ ಎರನೇ ಬಹುಮಾನ,ವಿಕ್ರಮ-೨೦೧೧ ರ ವಿಜಯಶಮಿ ಕಥಾಸ್ಪರ್ಧೇಯಲ್ಲಿ ಮೂರನೇ ಬಹುಮಾನ( ಕೇಸರಿ ಮತ್ತು ಬಿಳಿ) ನಬಂದಿವೆ.ತುಮುಲ,ಸಂಜೆ ಐದರ ಮಳೆ,ಹೆಂಜೇರಪ್ಪನ ಆಲೆಮನೆ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಐದು ಕಥಾ ಸಂಕಲನಗಳು- ಕಥಾಚೈತ್ರ,ಆಷಾಢದ ಮಳೆ,ಆಕಾಶಬುಟ್ಟಿ ಮತ್ತು ಏಳಿ,ನೀಲ ನಕ್ಷತ್ರ ಮತ್ತು ಸಂಜೆ ಐದರ ಮಳೆ ಪ್ರಕಟವಾಗಿವೆ.ನಾನುವೃತ್ತಿಯಿಂದ ಇಂಜಿನಿಯರ್.ಎಚ್ಎಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತ.

    ReplyDelete