ಚಲಚಿತ್ರಗಳ ಜಗತ್ತನ್ನು ಬಣ್ಣದ ಜಗತ್ತು ಎನ್ನುತ್ತಾರೆ. ಆದರೆ ಚಿತ್ರಗಳ ಪೋಸ್ಟರುಗಳದೂ ಒಂದು ರೀತಿಯ ಬಣ್ಣಗಳ ಜಗತ್ತೇ. ಪೋಸ್ಟರುಗಳ ಬಣ್ಣಗಳೇ ಎಷ್ಟು ಮಾತಾಡುತ್ತವೆ ಎಂಬುದನ್ನು ನಾವು ಎಷ್ಟೋ ಸಲ ಗಮನಿಸಿಯೇ ಇರುವುದಿಲ್ಲ. ಈಗ ನೀವೊಂದು ಪ್ರೇಮಕಥೆಯನ್ನೋ, romantic comedy ಮಾಡಬೇಕೆಂದು ಹೊರಟಿದ್ದೀರಿ ಎಂದುಕೊಳ್ಳಿ. ನೀವು ಅದರ ಪೋಸ್ಟರಿಗೆ ಯಾವ ಬಣ್ಣವನ್ನು ಬಳಸುತ್ತೀರಿ? ಈಗ ಕೆಳಗಿನ ಫೋಟೋಗಳನ್ನು ನೋಡಿ. ಹೇಗೆ ಎಲ್ಲ ಪೋಸ್ಟರುಗಳೂ ನೀಲಿ ಮತ್ತು ಬಿಳಿ ಬಣ್ಣದ ಸಮವಸ್ತ್ರವನ್ನು ಧರಿಸಿದ ಮಕ್ಕಳ ಹಾಗೆ ನೀಲಿ ಮತ್ತು ಬಿಳಿಗಳಲ್ಲೇ ಅದ್ದಲ್ಪಟ್ಟಿವೆ ಅಲ್ಲವೇ? ಕೆಂಪು, ಹಸುರು, ಕಂದು ಇತ್ಯಾದಿ ಬಣ್ಣಗಳ ಪೋಸ್ಟರುಗಳು ಪ್ರೇಮಕಥೆಗಳಿಗೆ ಇರುವುದು ಕಡಮೆಯೆಂದೇ ಹೇಳಬೇಕು.
ನಿಮಗೆ ಸ್ವಲ್ಪ ವೀರರಸ, ರೋಷಾವೇಶ ಬೇಕೇ? ತಲೆಬಿಸಿಯೇ ಬೇಡ. ಕಿತ್ತಳೆಯ, ಅಲ್ಲಲ್ಲ ಬೆಂಕಿಯ ಬಣ್ಣವೇ ಉಂಟಲ್ಲ? ಕೆಳಗಿನ ಫೋಟೋವನ್ನು ನೋಡಿ ಬೇಕಾದರೆ. ನೀಲಿ ಬಿಳಿ ಬಣ್ಣದ ಪೋಸ್ಟರುಗಳಿರುವ ಹೊಡಿಬಡಿ ಚಿತ್ರವೊಂದನ್ನು ಊಹಿಸಿಕೊಳ್ಳುವುದೇ ಕಷ್ಟ. ವರ್ಣಸಂಯೋಜನೆಗೆ ಎಷ್ಟರ ಮಟ್ಟಿಗೆ ಭಾವಗಳನ್ನು ಸೂಚಿಸುವ ಶಕ್ತಿ ಇದೆ ಎಂಬುದನ್ನು ನಾವು ಗಮನಿಸಿಯೇ ಇರುವುದಿಲ್ಲ. ಅಲ್ಲವೇ? ಎಲ್ಲರೂ ಹೀಗೆ ಸಿದ್ಧಮಾದರಿಯ ವರ್ಣಸಂಯೋಜನೆಗಳನ್ನೇ ಬಳಸುವುದರಿಂದ ಕ್ಲೀಷೆಗಳೂ ಸೃಷ್ಟಿಯಾಗುತ್ತವೆ ಅನ್ನಿ.
No comments:
Post a Comment